ಶಿವಮೊಗ್ಗ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ
ಶಿವಮೊಗ್ಗ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಇಲಿಯಾಜ್ ನಗರದಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಶಿವಮೊಗ್ಗ ನಗರದ ಮಂಡ್ಲಿ ನಿವಾಸಿ ಆಸೀಫ್ (25) ಎಂದು ಗುರುತಿಸಲಾಗಿದೆ.
ಕೊಲೆಯಾದ ಆಸೀಫ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ. ಕೊಲೆ ಮಾಡಿದ ಆರೋಪಿ ಜಬೀ (25) ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಕ್ಷಣಾರ್ಧದಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಜಬೀ ಸಹೋದರಿಯ ಪುತ್ರಿಯ ಹಿಂದೆ ಆಸೀಫ್ ಬಿದ್ದಿದ್ದ. ತನ್ನ ಸಹೋದರಿಯ ಪುತ್ರಿಗೆ ತೊಂದರೆ ನೀಡಬೇಡ ಎಂದು ಜಬೀ ಆಸೀಫ್ ಗೆ ಎಚ್ಚರಿಕೆ ನೀಡಿದ್ದ.
ಆದರೂ ಆಸೀಫ್ ತನ್ನ ಚಾಳಿ ಮುಂದುವರಿಸಿದ್ದ. ಇದರಿಂದ ಕೆರಳಿದ ಜಬೀ ಬುಧವಾರ ರಾತ್ರಿ ಇಲಿಯಾಜ್ ನಗರದ 100 ಅಡಿ ರಸ್ತೆಯಲ್ಲಿ ಆಸೀಫ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾನೆ.




