February 3, 2026

ಕಾರು, ಲಾರಿ ಮಧ್ಯೆ ಭೀಕರ ಅಪಘಾತ: ಕಾರಿನಲ್ಲಿದ್ದ ಇಬ್ಬರು ಮೃತ್ಯು, ಐವರಿಗೆ ಗಾಯ

0
image_editor_output_image-744745313-1686804847764.jpg

ತುಮಕೂರು: ಕಾರು ಮತ್ತು ಲಾರಿ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು, ಐವರು ತೀವ್ರವಾಗಿ ಗಾಯಗೊಂಡ ಘಟನೆ ತುಮಕೂರು-ಮಧುಗಿರಿ ರಸ್ತೆಯ ಕೊರಟಗೆರೆಯ ಜಟ್ಟಿ ಅಗ್ರಹಾರದ ಬಳಿ ನಡೆದಿದೆ.

ಮೃತರನ್ನು ಮಧುಗಿರಿಯ ಕೊಡಿಗೇನಹಳ್ಳಿಯ ಪರಮೇಶ್ (32), ದಾವಣಗೆರೆಯ ಶಿವನಾಯ್ಕ(30) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಸಿದ್ದೇಶ್, ನಾಗೇಶ್, ವೆಂಕಟೇಶ ಬಾಬು, ಮೋಹನ್ ಮತ್ತು ನಾಗೇಶ ಗಾಯಗೊಂಡವರು ಎಂದು ತಿಳಿದು ಬಂದಿದೆ.

ದಾಬಸ್‍ಪೇಟೆಯಲ್ಲಿ ಸ್ನೇಹಿತನ ಮದುವೆ ಕಾರ್ಯ ಮುಗಿಸಿ, ತುಮಕೂರಿನ ಸ್ನೇಹಿತನನ್ನು ಮನೆಗೆ ಬಿಟ್ಟು ಕೊಡಗೇನಹಳ್ಳಿಗೆ ಮರಳುತ್ತಿರುವಾಗ ಈ ಅಪಘಾತ ಸಂಭವಿಸಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸಿಪಿಐ ಕೆ.ಸುರೇಶ್, ಪಿಎಸ್‍ಐ ಜಿ.ಚೇತನ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!