February 2, 2026

ಬೈಕ್, ಟೆಂಪೋ ನಡುವೆ ಭೀಕರ ಅಪಘಾತ: ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಯುವಕರು ಮೃತ್ಯು

0
image_editor_output_image-1208555611-1686727939945.jpg

ಚಿಕ್ಕೋಡಿ: ಬೈಕ್ ಮತ್ತು ಟೆಂಪೋ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಯುವಕರು ಮೃತಪಟ್ಟಿರುವ ಘಟನೆ ಚಿಕ್ಕೋಡಿ ತಾಲೂಕಿನ ಬಸವನಾಳಗಡ್ಡೆ ಬಳಿ ಮಂಗಳವಾರ ರಾತ್ರಿ ನಡೆದಿದೆ.

ಮೃತ ಯುವಕರನ್ನು ಕೇರೂರ ಗ್ರಾಮದ ಪ್ರಶಾಂತ ಬೈರು ಖೋತ (22), ಸತೀಶ ಕಲ್ಲಪ್ಪ ಹಿರೇಕೊಡಿ(23), ಯಲಗೌಡ ಚಂದ್ರಕಾಂತ ಪಾಟೀಲ (22) ಎಂದು ಗುರುತಿಸಲಾಗಿದೆ.

ಯುವಕರು ಬೈಕ್ ನಲ್ಲಿ ಚಿಕ್ಕೋಡಿ ಕಡೆಯಿಂದ ಕೇರೂರ ಗ್ರಾಮಕ್ಕೆ ತೆರಳುವ ಸಮಯದಲ್ಲಿ ಚಿಕ್ಕೋಡಿ- ಅಂಕಲಿ ರಸ್ತೆಯ ಬಸವನಾಳಗಡ್ಡೆ ಬಳಿ ಟೆಂಪೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಇಬ್ಬರು ಸ್ಥಳದಲ್ಲಿ ಮೃತಪಟ್ಟರೆ ಓರ್ವ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!