August 12, 2026

ಭಟ್ಕಳ: ಮುರುಡೇಶ್ವರ ಬೀಚ್ ಗೆ ಇಳಿದಿದ್ದ ಓರ್ವ ನೀರು ಪಾಲು, ಮತ್ತಿಬ್ಬರ ರಕ್ಷಣೆ

0
image_editor_output_image-845429968-1686635464594.jpg

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ತಂಡವೊಂದು ಸೋಮವಾರ ಕಡಲಿನಲ್ಲಿ ಇಳಿದ ಸಂದರ್ಭ ಓರ್ವ ನೀರು ಪಾಲಾಗಿದ್ದರೆ ಮತ್ತಿಬ್ಬರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ನಿವಾಸಿಗಳ 22 ಜನರ ಗುಂಪೊಂದು ಸಿಗಂದೂರು, ಕೊಲ್ಲೂರು ಪ್ರವಾಸ ಮುಗಿಸಿ ಸೋಮವಾರ ಮುರುಡೇಶ್ವರಕ್ಕೆ ಆಗಮಿಸಿದ್ದರು.

ಸಮುದ್ರದ ಆಳೆತ್ತರ ಅಲೆಯನ್ನು ಲೆಕ್ಕಿಸದೇ ಸಮುದ್ರಕ್ಕಿಳಿದು ಆಟವಾಡುವ ವೇಳೆ ಮೂವರು ಅಲೆಯ ರಭಸಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದರು.

ಇದರದಲ್ಲಿ ಸಂತೋಷ ಹುಲಿಗುಂಡೆ (19) ಎನ್ನುವ ಯುವಕ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದು ಹಸನ್ ಮಜಗಿಗೌಡ (21) ಹಾಗೂ ಸಂಜೀವ ಹೆಬ್ಬಳ್ಳಿ (20) ಎನ್ನುವವರನ್ನು ರಕ್ಷಣೆ ಮಾಡಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!