February 2, 2026

ಪುತ್ತೂರು ಮಯ್ ದೆ ದೇವುಸ್ ಚರ್ಚ್ ನಲ್ಲಿ ಮಕ್ಕಳಿಗೆ ಭಾನುವಾರದ ಧರ್ಮೋಪದೇಶದ ಉದ್ಘಾಟನೆ

0
IMG-20230613-WA0006.jpg

ಪುತ್ತೂರು: 2023 ಜೂನ್ 11 ಯೇಸುವಿನ ಪವಿತ್ರ ಹೃದಯ ಮತ್ತು ರಕ್ತದ ಹಬ್ಬ. ಅಂದು ಬೆಳಿಗ್ಗೆ 8:15 ರ ಬಲಿ ಪೂಜೆಯಲ್ಲಿ 2023- 24ನೇ ಸಾಲಿನ ವಾರ್ಷಿಕ ಧರ್ಮಪದೇಶ ಶಿಕ್ಷಣ ಉದ್ಘಾಟನೆ ಮಾಡಲಾಯಿತು.

ಪೂಜೆ ಆರಂಭದಲ್ಲಿ ಎಲ್ಲಾ ಧರ್ಮೋಪದೇಶ ಕಲಿಸುವ ಶಿಕ್ಷಕರು ಹಾಗೂ ಕೆಲ ವಿದ್ಯಾರ್ಥಿಗಳ ತಂದೆ ತಾಯಂದಿರು ಹಾಗೂ ಕೆಲ ಮಕ್ಕಳು ಗುರುಗಳೊಂದಿಗೆ ದೇವಾಲಯವನ್ನು ಪ್ರವೇಶಿಸಿದರು. ನಂತರ ಧರ್ಮೋಪದೇಶ ಕುರಿತು ಕೆಲವು ಪ್ರಮುಖ ವಿಷಯಗಳನ್ನು ಸಾಂಕೇತಿಕ ರೀತಿಯಲ್ಲಿ ವ್ಯಕ್ತಪಡಿಸಿ ಧರ್ಮೋಪದೇಶವನ್ನು ಉದ್ಘಾಟನೆ ಮಾಡಿದರು.

ಉದ್ಘಾಟನೆಯ ಕೊನೆಯಲ್ಲಿ ಈ ವರ್ಷದ ಧರ್ಮೋಪದೇಶದ ಧ್ಯೇಯ “ಭಾನುವಾರದ ಧರ್ಮೋಪದೇಶದ ಶಿಕ್ಷಣ ಒಳ್ಳೆ ಕುಟುಂಬ ಕಟ್ಟಲು ಪ್ರೇರಣೆ”

ಪ್ರೇಷಿತರ ವಿಶ್ವಾಸ ಸಂಗ್ರಹದ ನಂತರ ಎಲ್ಲಾ ಧರ್ಮೋಪದೇಶ ಕಳಿಸುವ ಶಿಕ್ಷಕರು ಪ್ರಮಾಣವಚನವನ್ನು ಸ್ವೀಕರಿಸಿದರು.

ದಿವ್ಯ ಬಲಿ ಪೂಜೆಯನ್ನು ಪ್ರದಾನ ಧರ್ಮ ಗುರುಗಳಾದ ಅತೀ ವಂದನೀಯ ಲಾರೆನ್ಸ್ ಮಸ್ಕರೇನಸ್ , ಸಹಾಯಕ ಧರ್ಮ ಗುರುಗಳಾದ ವಂದನೀಯ ಲೋಹಿತ್ ಅಜಯ್ ಮಸ್ಕರೇನಸ್, ಮತ್ತು ವಂದನೀಯ ರೂಪೇಶ್ ರವೀನ್ ತಾವ್ರೊ ರವರು ನೆರವೇರಿಸಿದರು

Leave a Reply

Your email address will not be published. Required fields are marked *

error: Content is protected !!