March 22, 2026

ಪುತ್ತೂರು: 2022-23ನೇ ಸಾಲಿನ ಎನ್.ಎಮ್.ಎಮ್.ಎಸ್ ಪರೀಕ್ಷೆ: ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಯ ನಾಲ್ಕು ಮಂದಿ ವಿದ್ಯಾರ್ಥಿನಿಯರು ಆಯ್ಕೆ

0
Picsart_23-06-05_20-08-42-056.jpg

ಪುತ್ತೂರು: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು, ಇವರು 2022-23ನೇ ಸಾಲಿನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆಸಿದ ಎನ್.ಎಮ್.ಎಮ್.ಎಸ್ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಪೂಜಾ ಕೆ ರೈ, ಜೊಸ್ವಿಟ ಪಾಸ್, ಪ್ರಣಮ್ಯ, ಶಮಾ ಫಾತಿಮಾ ಇವರು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಶಿಕ್ಷಕಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪೂಜಾ ಕೆ ರೈ ಇವರು ಯಂ ವೆಂಕಪ್ಪ ರೈ ಮತ್ತು ಶ್ರೀಮತಿ ಜ್ಯೋತಿ ರೈರವರ ಪುತ್ರಿಯಾಗಿದ್ದಾರೆ.

ಜೊಸ್ವಿಟ ಪಾಸ್ ಇವರು ಜೋನ್ ಪಾಸ್ ಮತ್ತು ಸುನಿತ ಪಾಸ್ ರವರ ಪುತ್ರಿಯಾಗಿದ್ದಾರೆ.

ಪ್ರಣಮ್ಯ ಇವರು ಸತೀಶ್ ಕೆ ಆಚಾರ್ಯ ಮತ್ತು ಶಾಂತಿ ರವರ ಪುತ್ರಿಯಾಗಿದ್ದಾರೆ.

ಶಮಾ ಫಾತಿಮಾ ಇವರು ರಝಾಕ್ ಯು ಮತ್ತು ಶಹನಾಜ್ ರವರ ಪುತ್ರಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!