August 12, 2026

ಕಾಸರಗೋಡು: ವಿದ್ಯಾರ್ಥಿನಿಗೆ ಚಿತ್ರಹಿಂಸೆ: ಮಂಗಳೂರಿನ ಸುನೀಲ್ ಶೆಟ್ಟಿಯ ಬಂಧನ

0
image_editor_output_image-1587437521-1685859337330.jpg

ಕಾಸರಗೋಡು: ಮದುವೆಯ ಭರವಸೆ ನೀಡಿ 17 ವರ್ಷದ ಅಪ್ರಾಪ್ತೆ ವಿದ್ಯಾರ್ಥಿನಿಯೊಬ್ಬಳಿಗೆ ಚಿತ್ರಹಿಂಸೆ ನೀಡಿದ ಆರೋಪದಲ್ಲಿ ಮಂಗಳೂರಿನ ವ್ಯಕ್ತಿಯೊಬ್ಬನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಸುನೀಲ್ ಶೆಟ್ಟಿ ಕುಂಬಳೆ ಪೊಲೀಸರಿಂದ ಬಂಧಿತನಾದ ಆರೋಪಿಯಾಗಿದ್ದಾನೆ. ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಮಂಗಳೂರಿನ ಕಾಲೇಜೊಂದರಲ್ಲಿ ವ್ಯಾಸಾಂಗ ಮಾಡುತ್ತಿದ್ದಳು.

ಮಂಗಳೂರಿನಲ್ಲಿದ್ದ ಸುನೀಲ್ ಶೆಟ್ಟಿ ಆಕೆಯೊಂದಿಗೆ ಸಲುಗೆ ಬೆಳೆಸಿ ತನ್ನ ಮೋಹದ ಬಲೆಗೆ ಹಾಕಿ ನಿರಂತರವಾಗಿ ಕಿರುಕುಳ ಕೊಡುತ್ತಿದ್ದನು.

ಈ ವಿಷಯವನ್ನು ಯುವತಿ ಮನೆಯವರಲ್ಲಿ ತಿಳಿಸಿದಾದ ಅಪ್ರಾಪ್ತೆಯ ಹೇಳಿಕೆ ದಾಖಲಿಸಿದ ಕುಂಬಳೆ ಪೊಲೀಸರು ಠಾಣಾಧಿಕಾರಿ ಇ.ಅನೂಪ್ ನೇತೃತ್ವದಲ್ಲಿ ಆರೋಪಿ ಸುನೀಲ್ ಶೆಟ್ಟಿಯನ್ನು ಮಂಗಳೂರಿನಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!