ಸಿಡಿಲು ಬಡಿದು ಇಬ್ಬರು ಸಾವು
ಬೆಳಗಾವಿ: ರಾಜ್ಯದಲ್ಲಿ ಮುಂಗಾರು ಮಳೆ ಆಗಮನದ ಮೊದಲೇ ಗುಡಗು, ಸಿಡಿಲಿನ ಅಬ್ಬರ ಹೆಚ್ಚಾಗಿದ್ದು, ಸಂಜೆ ಸುರಿದ ಭಾರಿ ಮಳೆಗೆ ಅಥಣಿಯಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಅಥಣಿ ತಾಲೂಕಿನಲ್ಲಿ ಪ್ರತ್ಯೇಕ ಗ್ರಾಮದಲ್ಲಿ ಸಿಡಿಲು ಬಡೆದು ಒಬ್ಬ ಯುವಕ, ಒರ್ವ ಮಹಿಳೆ ಮೃತ ಪಟ್ಟಿದ್ದಾರೆ. ತಾಲೂಕಿನ ಕೋಹಳ್ಳಿ ಗ್ರಾಮದ ಕೆಸ್ಕರಿ ದಡ್ಡಿ ನಿವಾಸಿಯಾದ ಅಮೂಲ್ ಜಯಸಿಂಗ ಕಾನಡೆ (24) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ತೋಟದಲ್ಲಿ ಆಡುಗಳನ್ನು ಮೇಯಿಸಲು ಹೋಗಿದ್ದ ಸಮಯದಲ್ಲಿ ಯುವಕನಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದು ಕಡೆ ಅಥಣಿ ತಾಲೂಕಿನ ದೇಸಾರಹಟ್ಟಿ ಗ್ರಾಮದಲ್ಲಿ ವಿಠ್ಠಬಾಯಿ ಮಹದೇವ ಕಾಮಕರ (50) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಇವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಡಿಯುಡಿ ಗ್ರಾಮದ ನಿವಾಸಿಯಾಗಿದ್ದು, ಅಥಣಿ ತಾಲೂಕಿನ ದೇಸಾರಹಟ್ಟಿ ಗ್ರಾಮದ ಮಗಳ ಮನೆಗೆ ಬಂದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.