ಮೊಬೈಲ್ ಬಿದ್ದಿದ್ದಕ್ಕೆ ಡ್ಯಾಂ ನೀರನ್ನೇ ಖಾಲಿ ಮಾಡಿಸಿದ್ದ ಪ್ರಕರಣ: ಆಹಾರ ನಿರೀಕ್ಷಕನಿಗೆ 53 ಸಾವಿರ ರೂ. ದಂಡ

ರೈಪುರ್: ನೀರಿಗೆ ಮೊಬೈಲ್ ಬಿದ್ದಿದ್ದಕ್ಕೆ ಛತ್ತೀಸ್‍ಗಢದ ಪಾರಕೋಟ್ ಡ್ಯಾಂ ನೀರನ್ನೇ ಖಾಲಿ ಮಾಡಿಸಿದ್ದ ಆಹಾರ ನಿರೀಕ್ಷಕ ರಾಜೇಶ್ ಕುಮಾರ್ ಅವರಿಗೆ ರಾಜ್ಯ ನೀರಾವರಿ ಇಲಾಖೆ 53,092 ರೂ. ದಂಡ ವಿಧಿಸಿದೆ.
ರಾಜ್ಯದ ನೀರಾವರಿ ಇಲಾಖೆಯ ಲ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಅಧಿಕಾರಿ ಡೀಸೆಲ್ ಪಂಪ್‍ಗಳನ್ನು ಬಳಸಿ ನೀರನ್ನು ಹರಿಸಿದ್ದಾರೆ.
ತಮ್ಮ ವೈಯಕ್ತಿಕ ಉದ್ದೇಶಕ್ಕೆ ಸಾರ್ವಜನಿಕರ ಉಪಯೋಗಕ್ಕೆ ಬಳಕೆಯಾಗುವ ನೀರನ್ನು ಅಧಿಕಾರಿ ವ್ಯರ್ಥ ಮಾಡಿದ್ದಾರೆ. ಇದು ಕಾನೂನುಬಾಹಿರ ಮತ್ತು ಛತ್ತೀಸ್‍ಗಢ ನೀರಾವರಿ ಕಾಯಿದೆಯ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬಹುದಾದ ಅಪರಾಧಕ್ಕೆ ಸೇರುತ್ತದೆ ಎಂದು ಇಲಾಖೆಯ ಆದೇಶದಲ್ಲಿ ತಿಳಿಸಿದೆ.