ಬಂಟ್ವಾಳ: ಮನೆಗೆ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ

ಬಂಟ್ವಾಳ: ಮನೆಯೊಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ಚೆನೈತ್ತೋಡಿ ಗ್ರಾಮದ ವಾಮದಪದವಿನಲ್ಲಿ ನಡೆದಿದೆ.
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ವಾಮದಪದವು ಸಮೀಪದ ಕಡ್ತಲಬೆಟ್ಟು ಕೋಡಿಬಾಕಿಮಾರ್ ಎಂಬಲ್ಲಿ ಸುಧಾಕರ್ ಶೆಟ್ಟಿ ಎಂಬವರ ಮನೆಗೆ ಮೇ.25 ರಂದು ಗುರುವಾರ ಮಧ್ಯ ರಾತ್ರಿ 12.30 ರ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಸುಮಾರು 2 ಲಕ್ಷಕ್ಕೂ ಅಧಿಕ ರೂ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.
ಘಟನೆ ಸುದ್ದಿ ತಿಳಿದ ಕೂಡಲೇ ಸ್ಥಳೀಯ ಯುವಕರ ಸಹಾಯದಿಂದ ನೀರು ಹಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಲಾಗಿದೆ .ಹಾಗಾಗಿ ಹೆಚ್ಚಿನ ಅನಾಹುವನ್ನು ತಪ್ಪಿಸಲಾಗಿದೆ.