ಬಂಟ್ವಾಳ: ನಿವೃತ ಯೋಧ ಪಾಸ್ಕಲ್ ದಾಂತಿಸ್ ನಿಧನ
ಬಂಟ್ವಾಳ: ಭಾರತ-ಬಾಂಗ್ಲಾ ಮತ್ತು ಭಾರತ-ಪಾಕಿಸ್ತಾನ ಯುದ್ಧದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿದ ನಿವೃತ ಸೈನಿಕ ಪಾಸ್ಕಲ್ ದಾಂತಿಸ್ ಅವರು ಮೇ.23ರಂದು ನಿಧನ ಹೊಂದಿದರು.
ಪಾಸ್ಕಲ್ ದಾಂತಿಸ್(78) ನಿವೃತ್ತ ಸೈನಿಕ, ಪ್ರಗತಿಪರ ಕೃಷಿಕ ಇವರು ಮೂಡುಪಡುಕೋಡಿ ಗ್ರಾಮದ ಪಾಡಿ ನಿವಾಸಿಯಾಗಿದ್ದು, ಅಸೌಖ್ಯದಿಂದ ಮನೆಯಲ್ಲೇ ನಿಧನ ಹೊಂದಿದರು.
ಮೃತರು ಪತ್ನಿ, ನಿವೃತ್ತ ಮುಖ್ಯ ಶಿಕ್ಷಕಿ ರೆನ್ನಿ ಪಾಯ್ಸ್ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.




