“ಜನಪ್ರಿಯ”ತೆಗೊಂದು ಸಾಕ್ಷಿ..!: ಕಂಬಳಬೆಟ್ಟು “ಜನಪ್ರಿಯ ಸೆಂಟ್ರಲ್ ಸ್ಕೂಲ್ ” ಇತರೆಡೆಗಿಂತ ವಿಭಿನ್ನ ಯಾಕೆ ಗೊತ್ತಾ..?-: ವಿಶೇಷ ಲೇಖನ ರಶೀದ್ ವಿಟ್ಲ
ಪ್ರಖ್ಯಾತ ವೈದ್ಯ ಡಾ. ವಿ.ಕೆ. ಅಬ್ದುಲ್ ಬಶೀರ್ ಅವರಿಗೆ ಈ ಸ್ಕೂಲ್ ನ್ನು ತನ್ನ ಕಾರ್ಯಕ್ಷೇತ್ರ ಹಾಸನ ಪಟ್ಟಣದಲ್ಲೋ, ಮಂಗಳೂರು ನಗರದಲ್ಲೋ ನಿರ್ಮಿಸಬಹುದಿತ್ತು. ಇಷ್ಟೊಂದು ಸೌಲಭ್ಯವಿರುವ ಸ್ಕೂಲ್ ಬಹುಶ: ಜಿಲ್ಲಾ ಕೇಂದ್ರಗಳಲ್ಲೇ ಕಾಣಲು ಸಾಧ್ಯವಿಲ್ಲ. ಈ ಐಶಾರಾಮಿ ಶಾಲೆ ವಿಟ್ಲ ಸಮೀಪದ ಕಂಬಳಬೆಟ್ಟು ಎಂಬಲ್ಲಿರುವುದೇ ವಿಶೇಷ..!
ಹೌದು..! ಇದು ಜಸಪ್ರಿಯ ಸೆಂಟ್ರಲ್ ಸ್ಕೂಲ್. ಇಲ್ಲಿ ಏನೇನಿದೆ ಎನ್ನುವುದರ ಬದಲು ಏನೇನಿಲ್ಲ ಅಂತ ಕೇಳಬೇಕಷ್ಟೆ. ಅಂದರೆ ಮಕ್ಕಳ ಬೌದ್ಧಿಕ ಸಾಮರ್ಥ್ಯಕ್ಕೆ ಇಲ್ಲಿ ಎಲ್ಲವೂ ಇದೆ. ಈ ಶಾಲೆ ನಗರ ಪ್ರದೇಶದಲ್ಲಿ ಇದ್ದಿದ್ದರೆ ಬಹುಶಃ ವರ್ಷಕ್ಕೆ ಲಕ್ಷಗಟ್ಟಲೆ ಫೀಸು ನೀಡಿ ಸರತಿ ಸಾಲಲ್ಲಿ ನಿಂತು ಮಕ್ಕಳನ್ನು ದಾಖಲಿಸುತ್ತಿದ್ದರು. ಆದರೆ ಡಾ. ಬಶೀರ್ ತಾನು ಹುಟ್ಟಿದ ತಾಯ್ನಾಡಿಗೆ ಕೊಡುಗೆಯಾಗಿ ಈ ಉನ್ನತ ಮಟ್ಟದ ಸೌಕರ್ಯವಿರುವ ವಿದ್ಯಾಸಂಸ್ಥೆಯನ್ನು ಕಟ್ಟಿಸಿದರು.
ಶಾಲೆಯ ಗೇಟು ದಾಟಬೇಕಾದರೆ ಮಕ್ಕಳಿಗೆ ಸೆಕ್ಯೂರಿಟಿ ನೀಡುವ ಅನುಭವೀ ಸಿಬ್ಬಂದಿ ನಮ್ಮನ್ನು ಸ್ವಾಗತಿಸುತ್ತಾರೆ. ಅಲ್ಲಿಂದ ಶುರುವಾಗುವ ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ಸಂಭ್ರಮ ಒಳಹೊಕ್ಕಂತೆ ಇಕ್ಕೆಲಗಳಲ್ಲಿ ಹೂತೋಟಗಳು ಕಂಗೊಳಿಸುತ್ತವೆ. ವಿಶಾಲವಾದ ಕ್ಯಾಂಪಸ್. ಆವರಣದ ಸುತ್ತ ಭದ್ರವಾದ ಕಂಪೌಂಡ್. ಮಧ್ಯೆ ಎರಡು ವಿಭಿನ್ನ ಸುಸಜ್ಜಿತ ಐಶಾರಾಮಿ ಶಾಲಾ ಕಟ್ಟಡಗಳು, ಒಂದು ಮಗ್ಗುಲಲ್ಲಿ ಸ್ವಿಮ್ಮಿಂಗ್ ಫೂಲ್, ಮನಸೂರೆಗೊಳ್ಳುವ ಇಂಡೋರ್ ಗೇಮ್ಸ್ ಕೋರ್ಟ್, ವೈವಿಧ್ಯಮಯ ಲೈಬ್ರರಿ, LKG, UKG ಯಿಂದ ಹಿಡಿದು ಈಗಿರುವ ಎಂಟನೇ ತರಗತಿ ತನಕ ಸ್ಮಾರ್ಟ್ ತರಗತಿ ಕೊಠಡಿಗಳು, ಎಲ್ಲವೂ ಡಿಜಿಟಲ್ ಕ್ಲಾಸಸ್, ಆಧುನಿಕ ತಂತ್ರಜ್ಞಾನದ ಕಂಪ್ಯೂಟರ್ ಲ್ಯಾಬ್, CBSE ಸೆಲೆಬಸ್ ಮಟ್ಟದ ಕಲಿಕೆ, ನುರಿತ ಅನುಭವಸ್ಥ ಹೈ ಕ್ವಾಲಿಫೈಡ್ ಟೀಚರ್ಸ್, ನಗುಮೊಗದಲ್ಲಿ ಸ್ವಾಗತಿಸುವ.ಸಿಬ್ಬಂದಿ ರಿಸಿಪ್ಷನಿಸ್ಟ್, ಉದಾರ ಮನಸ್ಸಿನ ವಿದ್ಯಾಪ್ರೇಮಿ ಆಡಳಿತ ವರ್ಗ, ಊರು ಕೇರಿ ಮಕ್ಕಳ ಪ್ರಯಾಣಕ್ಕೆ ಸ್ಕೂಲ್ ಬಸ್… ಇವುಗಳೇ ಜನಪ್ರಿಯ ವಿದ್ಯಾ ಸಂಸ್ಥೆಯ ಜನಪ್ರಿಯತೆ. ಇಷ್ಟು ಸೌಕರ್ಯದ ಶಾಲೆ ಬಹುಶಃ ಮಂಗಳೂರಿನ ಒಂದೆರಡು ವಿದ್ದಾಸಂಸ್ಥೆ ಬಿಟ್ಟರೆ ನಮ್ಮ ಜಿಲ್ಲೆಯಲ್ಲಿ ಬೇರೆಲ್ಲೂ ಇಲ್ಲ.
ಹಾಗಂತ ಹೇಳಿ ಇಲ್ಲಿ ಲಕ್ಷಗಟ್ಟಲೆ ಫೀಸಿಲ್ಲ. ವಿಟ್ಲ-ಪುತ್ತೂರು ಸುತ್ತಮುತ್ತ ಇರುವ ಸಾಧಾರಣ ವ್ಯವಸ್ಥೆಯ ಖಾಸಗಿ ಶಾಲೆಗಿಂತಲೂ ಕಡಿಮೆ ಫೀಸಲ್ಲಿ ಜನಪ್ರಿಯ ಸೇವೆ ನೀಡುತ್ತದೆ. ಮಕ್ಕಳ ವಿಕಾಸಕ್ಕಾಗಿ ವರ್ಷದುದ್ದಕ್ಕೂ ಹಲವಾರು ಗುಣಮಟ್ಟದ ಕಾರ್ಯಕ್ರಮಗಳು, ಸ್ಪರ್ಧೆಗಳನ್ನು ಏರ್ಪಡಿಸುತ್ತದೆ. ನೈತಿಕ ಜೀವನಾಧಾರಿತ ಶಿಕ್ಷಣವೇ ಜನಪ್ರಿಯದ ಪ್ಲಸ್ ಪಾಯಿಂಟ್. ಜನಪ್ರಿಯ ವಿದ್ಯಾಸಂಸ್ಥೆ ಪ್ರಾರಂಭವಾದ ಎರಡ್ಮೂರು ವರ್ಷದಲ್ಲೇ ವಿದ್ಯಾರ್ಥಿಗಳ ಸಂಖ್ಯೆ ಐನೂರರ ಅಂಚಿಗೆ ತಲುಪಿದೆ ಎಂದರೆ ಇದರ ಜನಪ್ರಿಯತೆ ಎಷ್ಟಿರಬೇಡ. ಇಲ್ಲಿ ಕಲಿಯುವ ಮಕ್ಕಳು ಪುಣ್ಯವಂತರು. ನಿಮ್ಮ ಮಕ್ಕಳೂ ಎಲ್ಲಾ ರಂಗದಲ್ಲೂ ಮಿಂಚಬೇಕೆಂದರೆ ಇಲ್ಲಿ ಎಲ್ಲಾ ಕ್ಷೇತ್ರದ ಸಾಧನೆಗೂ ಸೌಲಭ್ಯ ಮತ್ತು ಆಸ್ಪದವಿದೆ. ಸಾವಿರಕ್ಕೂ ಅಧಿಕ ಸಂಖ್ಯೆಯ ಸಾಮರ್ಥ್ಯದ ಕಟ್ಟಡ ತಲೆ ಎತ್ತಿ ನಿಂತಿದೆ. ಇದು ಕೇವಲ ಹೈಲೈಟ್ಸ್. ಈ ಸಂಸ್ಥೆಗೆ ನೀವೊಮ್ಮೆ ಭೇಟಿ ನೀಡಿ. ಅದ್ಭುತ ಮತ್ತು ಅಸಾಧಾರಣ ಶಾಲೆಯೊಂದರ ದರ್ಶನ ಪಡೆಯುವಿರಿ. ಶಾಲೆಯ ಆಡಳಿತಾಧಿಕಾರಿಯ ಸಂಪರ್ಕ ನಂಬ್ರ: 7353938028 (Administrator)