December 19, 2025

ಬಾಗಲಕೋಟೆ: ಕೊಲೆ ಪ್ರಕರಣ:
ಏಳು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

0
62321159.jpg

ಬಾಗಲಕೋಟೆ: ಇಲ್ಲಿನ ಶಿರೂರು ಗ್ರಾಮದಲ್ಲಿ ಎಸ್‌ಡಿಎಸ್ ಅಧ್ಯಕ್ಷರ ಆಯ್ಕೆ ವೇಳೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 7 ಜನ ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಯಲ್ಲಪ್ಪ ಗಾಳಿ (55) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಾಗಲಕೋಟೆ 2ನೇ ಹೆಚ್ಚುವರಿ ಕೋರ್ಟ್ ಜೀವಾವಧಿ ಶಿಕ್ಷೆಯ ಆದೇಶ ನೀಡಿದೆ. 2012 ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸಂತೋಷ ಸಿ.ಬಿ ಅವರಿಂದ ಆದೇಶ ನೀಡಲಾಗಿದೆ.

ಸರಕಾರಿ ಅಭಿಯೋಜಕರಾದ ಸುನಿಲ್ ಹಂಜಿ ಕೊಲೆಯಾದವರ ಪರ ವಾದ ಮಂಡಿಸಿದ್ದರು. ಶಿರೂರು ಗ್ರಾಮದಲ್ಲಿ ಫೆಬ್ರವರಿ 1 2012 ರಂದು ರಾತ್ರಿ 1 ಗಂಟೆಗೆ ಕೊಲೆ ಪ್ರಕರಣ ನಡೆದಿತ್ತು. ಶಿರೂರು ಸರಕಾರಿ ಪ್ರಾಥಮಿಕ ಶಾಲೆ ಎಸ್ಡಿಎಮ್ಸಿ ಅಧ್ಯಕ್ಷ ಆಯ್ಕೆ ವೇಳೆ ಯಲ್ಲಪ್ಪ ಗಾಳಿ ಎಂಬುವರ ಕೊಲೆ ನಡೆದಿತ್ತು. ಮನೆಗೆ ಪೆಟ್ರೋಲ್ ಎರಚಲಾಗಿತ್ತು. ಜೀವನ್ಮರಣ ಹೋರಾಟದ ಮಧ್ಯೆ ಯಲ್ಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಫೆಬ್ರವರಿ 4 2012 ರಂದು ಮಿರಜ್ನಲ್ಲಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದ ಯಲ್ಲಪ್ಪ ಗಾಳಿ ಸಾವನ್ನಪ್ಪಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!