ಮನೆಯ ಬಾತ್‌ರೂಮ್‌ನಲ್ಲಿ ನಟನ ಮೃತದೇಹ ಪತ್ತೆ
ಮುಂಬೈ: ನಟ, ಮಾಡೆಲ್, ಫೋಟೋಗ್ರಾಫರ್ ಆದಿತ್ಯ ಸಿಂಗ್ ರಜಪೂತ್ (32) ಸಾವನ್ನಪ್ಪಿದ್ದಾರೆ.
ಮೇ 22 ರಂದು ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿರುವ ತಮ್ಮ ಮನೆಯ ಬಾತ್‌ರೂಮ್‌ನಲ್ಲಿ ಆದಿತ್ಯ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದಾರೆ.
ಮುಂಬೈನ ಅಂಧೇರಿಯ ಅಪಾರ್ಟ್‌ಮೆಂಟ್‌ನಲ್ಲಿ ಆದಿತ್ಯ ಸಿಂಗ್ ರಜಪೂತ್ ವಾಸಿಸುತ್ತಿದ್ದರು. ಬಾತ್‌ರೂಮ್‌ನಲ್ಲಿ ಬಿದ್ದಿದ್ದ ಆದಿತ್ಯ ಸಿಂಗ್ ರಜಪೂತ್ ಅವರನ್ನ ಸ್ನೇಹಿತರೊಬ್ಬರು ಹಾಗೂ ಅಪಾರ್ಟ್‌ಮೆಂಟ್‌ನ ವಾಚ್‌ಮ್ಯಾನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಆಸ್ಪತ್ರೆ ತಲುಪುವ ಮುನ್ನವೇ ಆದಿತ್ಯ ಸಿಂಗ್ ರಜಪೂತ್ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ರಜಪೂತ್ ಸಾವಿನ ಬಗ್ಗೆ ಅನುಮಾನಾಸ್ಪದವಾಗಿ ಯಾವುದೂ ಕಂಡುಬಂದಿಲ್ಲ. ಆಕಸ್ಮಿಕ ಸಾವಿನಂತೆ ಕಂಡುಬಂದಿದೆ. ಅವರ ದೇವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




