March 16, 2026

ಉಡುಪಿ: ಮನೆಯಲ್ಲೇ ನೇಣು ಬಿಗಿದು ತಾಯಿ, ಮಗ ಆತ್ಮಹತ್ಯೆ: ಕಾರಣ ನಿಗೂಢ
 

0
dead_4.jpg

ಉಡುಪಿ: ಕಿನ್ನಿಮುಲ್ಕಿಯ ಕನ್ನರ್ಪಾಡಿಯಲ್ಲಿ ಗುರುವಾರ ಮಧ್ಯಾಹ್ನ ತಾಯಿ ಮತ್ತು ಮಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 

ಬ್ರಹ್ಮಬೈದರ್ಕಳ ನಗರದ ಬಾಡಿಗೆಮನೆ ನಿವಾಸಿಯಾದ ಎಡ್ಲಿನ್ ಡೆಲಿಶಾ (83) ಹಾಗೂ ಅವರ ಮಗ ಸೆಬೆಸ್ಟಿನ್ ಅಮಿತ್ (46) ಮೃತರು.

ಈ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮನೆಯಲ್ಲಿ ಇಬ್ಬರೇ ವಾಸವಾಗಿದ್ದು, ಸೆಬೆಸ್ಟಿನ್ ಮೃತದೇಹ ಮನೆಯ ಫ್ಯಾನಿಗೆ  ನೆತಾಕಿಕೊಂಡಿದ್ದು ಎಡ್ಲಿನ್ ಅವರ ಮೃತದೇಹ ಅದೇ ಕೊಠಡಿಯ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇನ್ನು ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಐ ಮಹೇಶ್ ಪಿ.ಎಂ., ಎಎಸ್ ಐ ವಿಜಯ, ಹೆಡ್ ಕಾನ್ಸ್ ಸ್ಟೇಬಲ್ ಮರಿಗೌಡ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಅಜ್ಜರಕಾಡು ಆಸ್ಪತ್ರೆಗೆ ಸಾಗಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!