July 4, 2026

ಪ್ರೇಯಸಿಯನ್ನು ಕೊಲೆಗೈದ‌  ದುಷ್ಕರ್ಮಿಗೆ ಜೀವಾವಧಿ ಶಿಕ್ಷೆ, 2.5 ಲಕ್ಷ ರೂ. ದಂಡ

0
image_editor_output_image1307237622-1684352444524.jpg

ತಿರುವನಂತನಪುರಂ: ಆ ಧರ್ಮ ಗುರು ತನ್ನ ಹೆಂಡತಿಯನ್ನು ಹೇಗೆ ಕೊಂದ? ಎಂದು ಗೂಗಲ್‍ನಲ್ಲಿ ಸರ್ಚ್ ಮಾಡಿ ಸಂಚು ರೂಪಿಸಿ ಪ್ರೇಯಸಿಯನ್ನು ಕೊಲೆಗೈದ‌ ದುಷ್ಕರ್ಮಿಗೆ ಜೀವಾವಧಿ ಶಿಕ್ಷೆ ಹಾಗೂ 2.5 ಲಕ್ಷ ರೂ. ದಂಡ ವಿಧಿಸಿ ಕೊಲ್ಲಂನ ಹೆಚ್ಚುವರಿ ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ.

ಅಪರಾಧಿ ಪ್ರಶಾಂತ್ ನಂಬಿಯಾರ್, 2020ರ ಮಾ. 20ರಂದು ಇಂಟರ್‌ನೆಟ್ ಕೊಲೆಯ ಪ್ರಕರಣವೊಂದನ್ನು ಸರ್ಚ್ ಮಾಡಿ, ಅದರಂತೆ ಪ್ರೇಯಸಿ ಸುಚಿತ್ರಾ ಪಿಳ್ಳೈಯನ್ನು (42) ಹತ್ಯೆ ಮಾಡಿದ್ದ.

ಅಲ್ಲದೆ ಕೊಲೆಗೈದ ನಂತರ ಚಲನಚಿತ್ರವೊಂದನ್ನು ನೋಡಿ, ಅದರಲ್ಲಿ ದೇಹವನ್ನು ಕತ್ತರಿಸಿದ್ದ ರೀತಿಯಲ್ಲೇ ತುಂಡು ತುಂಡಾಗಿ ಕತ್ತರಿಸಿದ್ದ. ಬಳಿಕ ಮನೆಯ ಹಿಂದಿನ ಹೊಂಡದಲ್ಲಿ ಎಸೆದಿದ್ದ.

ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಆತನ ಗೂಗಲ್ ಸರ್ಚ್ ಹಿಸ್ಟರಿಯಿಂದ ಕೊಲೆ ರಹಸ್ಯ ಬಯಲಿಗೆಳೆದಿದ್ದರು.

ಖಾಸಗಿ ಶಾಲೆಯಲ್ಲಿ ಸಂಗೀತ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಪರಾಧಿ, ತನ್ನ ಹೆಂಡತಿಯ ಸಂಬಂಧಿ ಸುಚಿತ್ರಾಳನ್ನು ಕುಟುಂಬದ ಕಾರ್ಯಕ್ರಮದಲ್ಲಿ ಪರಿಚಯ ಮಾಡಿಕೊಂಡಿದ್ದ. ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಇಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿತ್ತು.

Leave a Reply

Your email address will not be published. Required fields are marked *

You may have missed

error: Content is protected !!