March 16, 2026

ಕಾಸರಗೋಡು: ದಾಖಲೆಗಳಿಲ್ಲದ 18 ಲಕ್ಷ ರೂ. ಸಹಿತ ಓರ್ವನ ಬಂಧನ

0
20230517_193243.jpg

ಕಾಸರಗೋಡು: ದಾಖಲೆಗಳಿಲ್ಲದ ಸುಮಾರು 18 ಲಕ್ಷ ರೂ. ಸಹಿತ ಓರ್ವನನ್ನು ಡಿ ವೈ ಎಸ್ಪಿ ಪಿ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಕಾಞ೦ಗಾಡ್ ನ ಕೆ. ಕೆ ಇರ್ಷಾದ್ (33) ಬಂಧಿತ ಆರೋಪಿಯಾಗಿದ್ದಾನೆ.

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ನೀಲೇಶ್ವರ ಮಾರ್ಕೆಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈತನ ಸ್ಕೂಟರ್ ನಲ್ಲಿ ಸಾಗಿಸುತ್ತಿದ್ದ ಹಣ ವನ್ನು ವಶಪಡಿಸಿಕೊಳ್ಳಲಾಗಿದೆ. ಸೀಟಿನಡಿಯಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದನು. 500 ರೂ.ಮುಖಬೆಲೆಯ 18.5 ಲಕ್ಷ ರೂ. ವಶಪಡಿಸಿ ಕೊಳ್ಳಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!