July 4, 2026

ಕಾಸರಗೋಡು: ಕೇರಳಕ್ಕೆ ಮಾದಕ ವಸ್ತು ಸಾಗಾಟ: ನೈಜೀರಿಯ ಮೂಲದ ಯುವತಿ ಅರೆಸ್ಟ್

0
20230517_212510.jpg

ಕಾಸರಗೋಡು : ಕೇರಳಕ್ಕೆ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ತಂಡದ ನೈಜೀರಿಯ ಮೂಲದ ಯುವತಿಯನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾದ ಅಪ್ಸತ್ ರಿಹಾನತ್ ಯಾನೆ ಬ್ಲೆಸಿಂಗ್ ಜೋಯಿ(22) ಬಂಧಿತ ಯುವತಿ.

ಬೇಕಲ ಪೊಲೀಸರು ಬೆಂಗಳೂರು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಈಕೆಯನ್ನು ಬಂಧಿಸಿದ್ದು , ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ತಿಂಗಳ ಚಟ್ಟಂಚಾಲ್ ನಿವಾಸಿಯಾದ ದಂಪತಿ ಹಾಗೂ ಬೆಂಗಳೂರು ನಿವಾಸಿಗಳಾದ ಇಬ್ಬರನ್ನು 150 ಗ್ರಾಂ ಎಂ ಡಿ ಎಂ ಎ ಸಹಿತ ಬಂಧಿಸಲಾಗಿತ್ತು.

ಇವರಿಗೆ ಮಾದಕ ವಸ್ತು ಪೂರೈಸಿದ್ದು, ನೈಜೀರಿಯದ ಯುವತಿ ಎಂದು ಮಾಹಿತಿ ಲಭಿಸಿತ್ತುಇದರಂತೆ ಬೆಂಗಳೂರಿಗೆ ತೆರಳಿದ ಪೊಲೀಸರು ಬೆಂಗಳೂರಿನ ವಾಸ ಸ್ಥಳದಿಂದ ಈಕೆಯನ್ನು ಬಂಧಿಸಿದ್ದಾರೆ. ಬೆಂಗಳೂರಿನಿಂದ ಕಾಸರಗೋಡಿಗೆ ಭಾರೀ ಪ್ರಮಾಣದಲ್ಲಿ ಮಾದಕ ವಸ್ತು ಸರಬರಾ ಗು ತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಹಲವು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಕೆಲ ಸುಳಿವು ಲಭಿಸಿತ್ತು. ಈ ಮಾಹಿತಿ ಕೇಂದ್ರೀಕರಿಸಿ ನಡೆಸಿದ ತನಿಖೆ ಯಿಂದ ನೈಜೀರಿಯಾ ಮೂಲದ ಯುವತಿ ಯನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!