March 16, 2026

ಧರ್ಮಸ್ಥಳ: ನೇತ್ರಾವತಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

0
Picsart_23-05-15_19-09-37-511.jpg

ಧರ್ಮಸ್ಥಳ: ಸಮೀಪದ ನೇತ್ರಾವತಿ ನದಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ.

ಹಾಸನದ ಹರಳಹಳ್ಳಿಯ ಕೃಷ್ಣಪ್ಪ ಗೌಡ ಎಚ್.ಟಿ. ಮೃತರು ಎಂದು ಗುರುತಿಸಲಾಗಿದೆ.

ತನ್ನ ಪತ್ನಿ ಮಗನೊಂದಿಗೆ ಸ್ನಾನಕ್ಕೆ ಬಂದಿದ್ದು ನದಿ ನೀರಿಗೆ ಇಳಿದಿದ್ದರು. ಈ ವೇಳೆ ಪತ್ನಿ ಹಾಗೂ ಮಗನಿಗೆ ನೀರಿನಿಂದ ಮೇಲೆ ಬರಲಾಗದಿದ್ದು, ಅವರನ್ನು ಮೇಲೆಳೆದು ಅವರ ಪ್ರಾಣ ರಕ್ಷಿಸಿದ ಕೃಷ್ಣಪ್ಪ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!