ಪುತ್ತೂರು: ವಿಧಾನ ಸಭಾ ಕ್ಷೇತ್ರ:
ವಿಜಯ ಪತಾಕೆ ಹಾರಿಸಿದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ
ಪುತ್ತೂರು: ಪುತ್ತೂರು ವಿಧಾನ ಸಭಾಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಗೆಲುವು ಸಾಧಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿ ಕೊನೆವರೆಗೂ ತೀವ್ರ ಪೈಪೋಟಿ ನೀಡಿ, ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಬಿಜೆಪಿಯ ಆಶಾ ತಿಮ್ಮಪ್ಪ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಅಶೋಕ್ ಕುಮಾರ್ ರೈ (ಕಾಂಗ್ರೆಸ್) – 61797
ಅರುಣ್ ಪುತ್ತಿಲ (ಪಕ್ಷೇತರ) – 59124
ಆಶಾ ತಿಮ್ಮಪ್ಪ (ಬಿಜೆಪಿ) – 34871
ಶಾಫಿ ಬೆಳ್ಳಾರೆ (ಎಸ್ಡಿಪಿಐ) -2073
ಜಿದ್ದಾ ಜಿದ್ದಿನ ಮತ ಎಣಿಕೆಯಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ತೀವ್ರ ಪೈಪೋಟಿ ನೀಡಿದರು, ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ 2673 ಮತಗಳ ಅಂತರದಿಂದ ಜಯ ಬಾರಿಸಿದ್ದಾರೆ.




