ಬಳ್ಳಾರಿ ಗ್ರಾಮೀಣ: ಸತತ ನಾಲ್ಕು ಬಾರಿ ಶಾಸಕರಾಗಿದ್ದ ಶ್ರೀರಾಮುಲುಗೆ ಹೀನಾಯ ಸೋಲು
ಬಳ್ಳಾರಿ: ಸತತ ನಾಲ್ಕು ಬಾರಿ ಶಾಸಕ ಹಾಗೂ ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದ ಶ್ರೀರಾಮುಲು ಅವರು ಬಳ್ಳಾರಿ ಗ್ರಾಮೀಣದಲ್ಲಿ ಹೀನಾಯ ಸೋಲನುಭವಿಸಿದ್ದಾರೆ.
ಕಳೆದ ಬಾರಿ ಮೊಳಕಾಲ್ಮೂರು, ಬಾದಾಮಿ ಎರಡೂ ಕಡೆ ನಿಂತು ಮೊಳಕಾಲ್ಮೂರಿನಲ್ಲಿ ಜಯ ಸಾಧಿಸಿದ್ದ ಬಿಜೆಪಿಯ ಮುಂಚೂಣಿ ನಾಯಕ ಬಿ. ಶ್ರೀರಾಮುಲು ಅವರು ಈ ಬಾರಿ ಹೀನಾಯ ಸೋಲು ಅನುಭವಿಸಿದ್ದಾರೆ. ಬಳ್ಳಾರಿ ಗ್ರಾಮಾಂತರದಲ್ಲಿ ಶ್ರೀರಾಮುಲು ವಿರುದ್ಧ ಕಾಂಗ್ರೆಸ್‍ನ (Congress) ಹಾಲಿ ಶಾಸಕ ನಾಗೇಂದ್ರಗೆ ಭರ್ಜರಿ ಜಯ ಸಿಕ್ಕಿದೆ.




