ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಅಪರಾಧಿಗಳು ಕಾರಾಗೃಹದಿಂದ ಪರಾರಿ
ಅಸ್ಸಾಂ: ಸಿಲ್ಚಾರ್ ಕೇಂದ್ರ ಕಾರಾಗೃಹದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗಳು ಪರಾರಿಯಾಗಿದ್ದಾರೆ. ಈ ಸುದ್ದಿ ಇದೀಗ ಪೊಲೀಸ್ ಇಲಾಖೆ ಸೇರಿದಂತೆ ಇಡೀ ನಗರದಲ್ಲಿ ಸಂಚಲನ ಉಂಟಾಗಿದೆ.
ತಲೆಮರೆಸಿಕೊಂಡಿರುವ ಇಬ್ಬರೂ ಕೈದಿಗಳ ಪತ್ತೆಗೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಮಾಹಿತಿ ಪಡೆದ ಜಿಲ್ಲಾಧಿಕಾರಿ ರೋಹನ್ ಕುಮಾರ್ ಝಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ನೋಮಲ್ ಮಹತೋ ಅವರು ನಿನ್ನೆ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದರು.
ಹಿಫ್ಜುರ್ ರೆಹಮಾನ್ ಮತ್ತು ದೀಪ್ ನುನಿಯಾ ಎಂಬ ಇಬ್ಬರು ಕೈದಿಗಳು ನಿನ್ನೆ ರಾತ್ರಿ ಜೈಲಿನ ವಾರ್ಡ್ ಸಂಖ್ಯೆ 10ರಿಂದ ಪರಾರಿಯಾಗಿದ್ದಾರೆ ಎಂದು ಕ್ಯಾಚಾರ್ ಪೊಲೀಸ್ ವರಿಷ್ಠಾಧಿಕಾರಿ ನೋಮಲ್ ಮಹತೋ ತಿಳಿಸಿದ್ದಾರೆ. ಇಬ್ಬರೂ ಕೊಲೆ ಆರೋಪಿಗಳು. ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.




