March 16, 2026

ಮತದಾನಕ್ಕೆ ಆಗಮಿಸುತ್ತಿದ್ದಾಗ ಆನೆ ದಾಳಿ: ವ್ಯಕ್ತಿ ಮೃತ್ಯು

0
ms-090822-eliphnt.jpg

ಚಾಮರಾಜನಗರ : ಮತದಾನಕ್ಕಾಗಿ ಆಗಮಿಸುತ್ತಿದ್ದಂತ ವೇಳೆ ಆನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತೋಕೆರೆ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಪುಟ್ಟಸ್ವಾಮಿ(35) ಎಂಬುದಾಗಿ ಗುರುತಿಸಲಾಗಿದೆ.

ಪುಟ್ಟಸ್ವಾಮಿ ಮತದಾನಕ್ಕಾಗಿ ಮಹದೇಶ್ವರ ಬೆಟ್ಟದಲ್ಲಿರುವಂತ ಹಳೇ ಮಾರ್ಟನಳ್ಳಿಯಿಂದ ತೋಕೆರೆಗೆ ಕಾಲು ದಾರಿಯ ಮೂಲಕ ಬರುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ದಿಢೀರ್ ಆನೆ ದಾಳಿ ನಡೆಸಿ, ತುಳಿದು ಹಾಕಿದ್ದರಿಂದ ಪುಟ್ಟಸ್ವಾಮಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!