March 20, 2026

ವಿಟ್ಲ: ಅಡ್ಯನಡ್ಕ ವಾರಣಾಸಿ ಕೆರೆಯಲ್ಲಿ ವಿದ್ಯಾರ್ಥಿನಿ ಸಾವು ಪ್ರಕರಣ:
ನಿರ್ಲಕ್ಷ್ಯ ವಹಿಸಿದ ಜಾಗದ ಮಾಲಕ ಪಾರ್ಥ ವಾರಣಾಸಿ ವಿರುದ್ಧ ಪ್ರಕರಣ ದಾಖಲು

0
image_editor_output_image537739683-1637683237104

ವಿಟ್ಲ: ಅಡ್ಯನಡ್ಕ ವಾರಣಾಸಿ ಫಾರ್ಮ್ ನಲ್ಲಿ ವಿದ್ಯಾರ್ಥಿನಿ ಕೆರೆಗೆ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಮೃತಳ ತಾಯಿ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಮಾಲಕನ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೆರೆಯ ಮಾಲಕ ನಿರ್ಲಕ್ಷ್ಯ ವಹಿಸಿದ್ದಾರೆ ಪಾರ್ಥ ವಾರಣಾಸಿ ಅವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇಬಲ್‌ ಫೇರ್ನಾಂಡಿಸ್‌ ರವರ ಮಗಳು ಮೈಝಿ ಕರೋಲ್‌ ಫೇರ್ನಾಂಡಿಸ್‌ರವರು ಬಂಟ್ವಾಳ ತಾಲೂಕು ಕೇಪು ಗ್ರಾಮದ ವಾರಣಾಸಿ ಪಾಮ್ಸಗೆ ಕೃಷಿ ಅಧ್ಯಯನಕ್ಕೆಂದು ದಿನಾಂಕ:14-09-2021 ರಂದು ಆಗಮಿಸಿದ್ದರು. ವಾರಣಾಸಿ ಪಾರ್ಮ್ಸ್ ನ ಕೆರೆಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ತಿಂಗಳ ಬಳಿಕ ಆಕೆಯ ತಾಯಿ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ದೂರು ನೀಡಿದ್ದಾರೆ.

ಫೇರ್ನಾಂಡಿಸ್‌ರವರು ತನ್ನ ರೂಮಿನಿಂದ ವಾರಣಾಸಿ ಫಾಮ್ಸನಲ್ಲಿರುವ ನೀರಾವರಿ ಕೆರೆ ಬಳಿ ಹೋದಾಗ ಕೆರೆಗೆ ತಡಗೋಡೆ ಬೇಲಿಯನ್ನು ಅದರ ಮಾಲೀಕರಾದ ಫಾರ್ಥರವರು ನಿರ್ಮಿಸದೆ ನಿರ್ಲಕ್ಷ ವಹಿಸಿರುವುದರಿಂದ ಮೈಝಿ ಕರೋಲ್‌ ಫೇರ್ನಾಂಡಿಸ್‌ ಸುಮಾರು 15 ಅಡಿ ನೀರಿರುವ ಕೆರೆಗೆ ಬಿದ್ದು ಮೃತಪಟ್ಟಿದ್ದರು ಎಂದು ಆಕೆಯ ತಾಯಿ ಆರೋಪಿಸಿದ್ದು, ಅಲ್ಲದೇ ಮೈಝಿ ಕರೋಲ್‌ ಫೇರ್ನಾಂಡಿಸ್‌ ರವರ ಮರಣದ ಬಗ್ಗೆ ಸಂಶಯ ಇದೆ ಎಂದು ಆಕೆಯ ತಾಯಿ ದೂರು ನೀಡಿದ್ದು, ಪಾರ್ಥ ವಾರಣಾಸಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!