March 24, 2026

ಕಾಪು: ಬೋಟ್‌ನಿಂದ ಬಿದ್ದು ಮೀನುಗಾರ ಮೃತ್ಯು

0
dead-4-1.jpg

ಕಾಪು: ಮೀನುಗಾರಿಕಾ ಬೋಟ್‌ನ ಹಿಂಬದಿಯಲ್ಲಿ ನಿಂತು ಮೂತ್ರ ಮಾಡುತ್ತಿದ್ದ ಮೀನುಗಾರರೊಬ್ಬರು ಆಯ ತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೃತ ಮೀನುಗಾರನನ್ನು ತಮಿಳುನಾಡು ರಾಮೇಶ್ವರ ರಾಮನಗರ ಮಹಾಪುರಂ ನಿವಾಸಿ ತುತ್ರಿಯನ್‌ ಎಂಬವರ ಮೀನುಗಾರಿಕಾ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಜನ್‌ (32) ಎಂದು ಗುರುತಿಸಲಾಗಿದೆ.

ಮೃತ ರಾಜನ್‌ ಅವರು ತುತ್ರಿಯನ್‌ ಅವರ ಮೀನುಗಾರಿಕಾ ಬೋಟ್‌ನಲ್ಲಿ ಕಳೆದ ಎರಡು ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದು, ಮೇ 1ರಂದು ರಾತ್ರಿ ಬೋಟ್‌ನಲ್ಲಿ ಮಲ್ಪೆಯಿಂದ ಕೆಲಸಗಾರರೊಂದಿಗೆ ಹೊರಟು ಕಟಪಾಡಿಯ ಹತ್ತಿರ ತಲಪಿದಾಗ ಬೋಟ್‌ನಲ್ಲಿದ್ದ ಅವರು ಹಿಂಬದಿಯ ತುದಿಯಲ್ಲಿ ನಿಂತುಕೊಂಡು ಮೂತ್ರ ಮಾಡುತ್ತಿದ್ದ ವೇಳೆ ಆಯತಪ್ಪಿ ಬೋಟಿನಿಂದ ಸಮುದ್ರದ ನೀರಿಗೆ ಬಿದ್ದಿದ್ದರು.

ಇನ್ನು ತೀವ್ರ ಹುಡುಕಾಟದ ಬಳಿಕ ಮೇ 5ರಂದು ರಾಜನ್‌ ಅವರ ಮೃತದೇಹವು ಕಾಪು ಬೀಚ್‌ನಲ್ಲಿ ದೊರಕಿದೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!