ಚಾಮರಾಜನಗರದಲ್ಲಿ ನಾಯಕರ ರೋಡ್ ಶೋ: ಸುದೀಪ್ ಹತ್ತಿರ ಹೋಗಲು ಸಚಿವ ಸೋಮಣ್ಣರನ್ನು ಬೀಳಿಸಿದ ಸುದೀಪ್ ಅಭಿಮಾನಿ
ಚಾಮರಾಜನಗರ: ಬಿಜೆಪಿ ಪಕ್ಷದಿಂದ ನಟ ಸುದೀಪ್ ಸಚಿವ ವಿ.ಸೋಮಣ್ಣ ಪರವಾಗಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಶುಕ್ರವಾರ ಚಾಮರಾಜನಗರದಲ್ಲಿ ನಾಯಕರು ರೋಡ್ ಶೋ ನಡೆಸುತ್ತಿದ್ದ ವೇಳೆ ಸುದೀಪ್ ಹತ್ತಿರ ಹೋಗಲು ಧಾವಿಸಿದ ಅಭಿಮಾನಿ ಸೋಮಣ್ಣ ಅವರನ್ನು ಬೀಳಿಸಿರುವ ಪ್ರಸಂಗ ನಡೆದಿದೆ.
ಸಚಿವ ಸೋಮಣ್ಣ, ಕೊಳ್ಳೇಗಾಲ ಎನ್ ಮಹೇಶ್, ಗುಂಡ್ಲುಪೇಟೆ ನಿರಂಜನ್ ಕುಮಾರ್, ಹನೂರು ಪ್ರೀತನ್ ನಾಗಪ್ಪ ಪರ ಸುದೀಪ್ ಚಾಮರಾಜನಗರಲ್ಲಿ ರೋಡ್ ಶೋ ನಡೆಸಿದ್ದಾರೆ. ಗುಂಡ್ಲುಪೇಟೆ ಮೂಲಕ ರೋಡ್ ಶೋ ಆರಂಭ ಮಾಡಲಾಗಿದ್ದು, ಚಾಮರಾಜನಗರ, ಕೊಳ್ಳೇಗಾಲ, ಹನೂರು ಕ್ಷೇತ್ರದಲ್ಲಿ ರೋಡ್ ಶೋ ನಡೆದಿದೆ.
ರೋಡ್ ಶೋ ವೇಳೆ ಸಚಿವ ಸೋಮಣ್ಣ ಹಾಗೂ ಸುದೀಪ್ ಕಾರಿನ ಮೇಲೆ ನಿಂತು ಜನರತ್ತ ಕೈ ಬೀಸುತ್ತಿದ್ದರು.
ಆಗ ಸುದೀಪ್ ಬಳಿ ತೆರಳಲು ಅಭಿಮಾನಿಯೊಬ್ಬ ಕಾರಿನ ಮೇಲೆ ಹತ್ತಿದ್ದಾನೆ. ಬಳಿಕ ಆತ ಆಯತಪ್ಪಿದ್ದು, ಸಚಿವ ಸೋಮಣ್ಣ ಅವರನ್ನು ಹಿಡಿದುಕೊಂಡು ಕೆಳಕ್ಕೆ ಬಿದ್ದಿದ್ದಾನೆ. ಈ ವೇಳೆ ಸೋಮಣ್ಣ ಕೂಡಾ ಬಿದ್ದಿದ್ದು, ಅವರನ್ನು ಸುದೀಪ್ ಕಾರಿನ ಟಾಪ್‌ನಿಂದ ಕೆಳಕ್ಕೆ ಬೀಳದಂತೆ ಹಿಡಿದಿದ್ದರು.




