November 22, 2024

12 ವರ್ಷದ ಮಗನನ್ನು ಲೆಕ್ಕಿಸದೆ ಪ್ರಿಯಕರನ ಜತೆ ತೆರಳಿದ ಸಾಹಿದಾ:
ನಿನ್ನೆ ಉತ್ತರಪ್ರದೇಶದಲ್ಲಿ ಪತ್ತೆಯಾಗಿದ್ದ ಸಾಹಿದ

0

ಮಂಜೇಶ್ವರಂ: ಬಹಳ ದಿನಗಳ ನಂತರ ತನ್ನ ತಾಯಿಯನ್ನು ನೋಡಿದಾಗ ಹನ್ನೆರಡು ವರ್ಷದ ಮಗ ಅಳುತ್ತಿದ್ದರೂ ಅದನ್ನು ಲೆಕ್ಕಿಸದೇ ತಾಯಿ ಕುಂಞಿ ಬೀವಿ ಅಲಿಯಾಸ್ ಸಾಹಿದಾ (35) ಇತರ ರಾಜ್ಯದ ನೌಕರನ ಜತೆ ಪರಾರಿಯಾಗಿದ್ದಳು.

ಇದೀಗ ಒಂಬತ್ತು ತಿಂಗಳ ಬಳಿಕ ನಾಪತ್ತೆಯಾಗಿದ್ದ ಪಾವೂರು ಮೂಲದ ಸಾಹಿದಾ ಳನ್ನು ತನ್ನ ಪ್ರಿಯಕರನೊಂದಿಗೆ ಉತ್ತರ ಪ್ರದೇಶದ ಲಕ್ನೋದಿಂದ ಮಂಜೇಶ್ವರಂ ಪೊಲೀಸರು ಪತ್ತೆ ಹಚ್ಚಿದ್ದರು.

ನಿನ್ನೆ ಬೆಳಗ್ಗೆ ಇಬ್ಬರನ್ನೂ ಮಂಜೇಶ್ವರಂ ಪೊಲೀಸ್ ಠಾಣೆಗೆ ಕರೆತಂದು ಹೇಳಿಕೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇದೇ ವೇಳೆ 12 ವರ್ಷದ ಏಕೈಕ ಪುತ್ರ ಹಾಗೂ ಕೆಲ ಸಂಬಂಧಿಕರು ನ್ಯಾಯಾಲಯದಕ್ಕೆ ತಲುಪಿದ್ದರೂ ತಾಯಿಯನ್ನು ನೋಡಿ ಅಲುತ್ತಿದ್ದ ಮಗನನ್ನು ಸಂಬಂಧಿಕರು ಸಮಾಧಾನ ಪಡಿಸಲು ಯತ್ನಿಸಿದರು. ಸಾಹಿದಾ ತಮ್ಮ ಜೊತೆ ಬರುವಂತೆ ಸಂಬಂಧಿಕರೂ ಕೇಳಿಕೊಂಡರೂ ಅದನ್ನು ಲೆಕ್ಕಿಸದೇ, ಮಗನನ್ನು ಲೆಕ್ಕಿಸದೇ ಪ್ರಿಯಕರನ ಜತೆ ತೆರಳಿದಲು.

ಸಾಹಿದಾ ಮತ್ತು 25 ವರ್ಷದ ಟೈಲ್ಸ್ ಉದ್ಯೋಗಿ ಮೊಬೈಲ್ ಚಾಟಿಂಗ್ ಮೂಲಕ ಪರಸ್ಪರ ಪರಿಚಯ ಮಾಡಿಕೊಂಡಿದ್ದರು. ಡಿವೈಎಸ್ಪಿ ಪಿ.ಕೆ ಸುಧಾಕರನ್ ತಂಡದ ಸದಸ್ಯರಾದ ಲಕ್ಷ್ಮೀ ನಾರಾಯಣನ್, ಶ್ರೀಜಿತ್ ಮತ್ತು ಮಂಜೇಶ್ವರಂ ಠಾಣೆಯ ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿ ಥಾಮಸ್ ತಂಡ ಸಾಹಿದಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!