February 3, 2026

ಉಳ್ಳಾಲ: ಭಂಡಾರಬೈಲು ಘನತ್ಯಾಜ್ಯ ಘಟಕದಲ್ಲಿ ಅಳವಡಿಸಿದ ಸಿಸಿಟಿವಿ ಸಹಿತ ಸೊತ್ತುಗಳ ಕಳವು

0
Screenshot_2023-05-02-11-16-09-16_680d03679600f7af0b4c700c6b270fe7.jpg

ಉಳ್ಳಾಲ: ಇಲ್ಲಿನ ಮುನ್ನೂರು ಗ್ರಾ. ಪಂ ಒಳಪಡುವ ಭಂಡಾರಬೈಲು ಘನತ್ಯಾಜ್ಯ ಘಟಕದಲ್ಲಿ ಅಳವಡಿಸಿದ ಸಿಸಿಟಿವಿ ಸೇರಿದಂತೆ ಇರಿಸಿದ್ದ ಸೊತ್ತುಗಳನ್ನು ಕಳವು ನಡೆಸಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಂಡಾರ ಬೈಲು ಪ್ರದೇಶದಲ್ಲಿರುವ ಘನ ತ್ಯಾಜ್ಯ ಘಟಕದ ಕೋಣೆಯಲ್ಲಿ ಇರಿಸಿದ್ದ ಸಿಸಿಟಿವಿ ಕ್ಯಾಮರದ ಡಿ.ವಿ.ಆರ್, ಮೋನಿಟರ್, ಯು.ಎಸ್.ಬಿ ಬ್ಯಾಟರಿ, ಎಂಟು ಬೀದಿ ದೀಪ ಟ್ಯೂಬ್ಲೈಟ್, ಐದು ಎಲ್.ಇ.ಡಿ ಬೀದಿ ದೀಪ ಹಾಗೂ ಬೀದಿ ದೀಪ ದುರಸ್ಥಿ , ಪೈಪ್ ಲೈನ್ ದುರಸ್ಥಿಯ ಗುಜರಿ ಸ್ವತ್ತುಗಳನ್ನು ಕಳವು ನಡೆಸಲಾಗಿದೆ.

ಎ.22 ರಿಂದ ಎ.28ರ ಒಳಗಡೆ ಕಳ್ಳರು ಘಟಕದ ಬೀಗವನ್ನು ಒಡೆದು ಒಳಪ್ರವೇಶಿಸಿ ಕೃತ್ಯ ಎಸಗಿದ್ದಾರೆ. ಸ್ವತ್ತುಗಳ ಅಂದಾಜು ಮೌಲ್ಯ 35,060/- ಆಗಿದೆ. ಅಭಿವೃದ್ಧಿ ಅಧಿಕಾರಿ ರವೀಂದ್ರ ರಾಜೀವ ನಾಯಕ್ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!