March 16, 2026

ಉಡುಪಿ: ಟಾಸ್ಕ್ ಪೂರ್ಣಗೊಳಿಸಿದರೆ ಹೆಚ್ಚುವರಿ ಹಣ ನೀಡುವುದಾಗಿ ಆಮಿಷವೊಡ್ಡಿ 5.90 ಲಕ್ಷ ರೂ.ವಂಚನೆ: ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲು

0
IMG-20230213-WA0008.jpg

ಉಡುಪಿ: ಟೆಲಿಗ್ರಾಂ ಆ್ಯಪ್‌ನಲ್ಲಿ ಟಾಸ್ಕ್ ಲಿಂಕ್ ಕಳುಹಿಸಿ, ಟಾಸ್ಕ್ ಪೂರ್ಣಗೊಳಿಸಿದರೆ ಹೆಚ್ಚುವರಿ ಹಣ ನೀಡುವುದಾಗಿ ನಂಬಿಸಿ ಯುವಕನಿಗೆ ಲಕ್ಷಾಂತರ ರೂ. ಮೋಸ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

80 ಬಡಗಬೆಟ್ಟು ಗ್ರಾಮದ ರಾಜೀವ ನಗರದ ನಿವಾಸಿ ಗೋಪಾಲ (29) ಎಂಬವರಿಗೆ ಅಪರಿಚಿತ ವ್ಯಕ್ತಿಗಳು ಟಾಸ್ಕ್ ಲಿಂಕ್ ಕಳುಹಿಸಿದ್ದು, ಟಾಸ್ಕ್ ಕಂಪ್ಲೀಟ್ ಮಾಡಿದಲ್ಲಿ ಶೇ.30ರಿಂದ 40 ಹೆಚ್ಚುವರಿ ಹಣ ನೀಡುವುದಾಗಿ ಹೇಳಿದ್ದರೆನ್ನಲಾಗಿದೆ.

ಇದನ್ನು ನಂಬಿದ ಗೋಪಾಲ ಟಾಸ್ಕ್ ಬಗ್ಗೆ ಎ.25ರಿಂದ 27ರವರೆಗೆ ಒಟ್ಟು 5,90,000ರೂ. ಹಣವನ್ನು ಆರೋಪಿಗಳ ವಿವಿಧ ಖಾತೆಗಳಿಗೆ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿರುವುದಾಗಿ ತಿಳಿದುಬಂದಿದೆ. ಆದರೆ ಆರೋಪಿಗಳು ಟಾಸ್ಕ್ ನೀಡದೇ ಪಡೆದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.

Leave a Reply

Your email address will not be published. Required fields are marked *

error: Content is protected !!