December 15, 2025

ಸೇನಾ ಇತಿಹಾಸದಲ್ಲೇ ಮೊದಲ ಬಾರಿ ಐವರು ಮಹಿಳಾ ಸೇನಾಧಿಕಾರಿಗಳು ಫಿರಂಗಿದಳಕ್ಕೆ ನಿಯೋಜನೆ

0
IMG-20230429-WA0061.jpg

ನವದೆಹಲಿ: ಭಾರತದ ಸೇನಾ ಇತಿಹಾಸದಲ್ಲೇ ಮೊದಲ ಬಾರಿಗೆ ಐವರು ಮಹಿಳಾ ಸೇನಾಧಿಕಾರಿಗಳನ್ನು ತನ್ನ ಫಿರಂಗಿದಳಕ್ಕೆ ನಿಯೋಜಿಸಿದೆ.

ಲೆ.ಮೇಹಕ್ ಸೈನಿ, ಲೆ. ಸಾಕ್ಷಿ ದುಬೆ, ಲೆ. ಆದಿತಿ ಯಾದವ್ ಹಾಗೂ ಲೆ. ಪಿಯೂಸ್ ಮುದ್ಗಿಲ್ ಫಿರಂಗಿದಳಕ್ಕೆ ಸೇರ್ಪಡೆಗೊಂಡ ಮಹಿಳಾ ಸೇನಾಧಿಕಾರಿಗಳಾಗಿದ್ದಾರೆ.

ಈ ಐವರು ಮಹಿಳಾ ಸೇನಾಧಿಕಾರಿಗಳ ಪೈಕಿ ಮೂವರನ್ನು ಚೀನಾದ ಜೊತೆಗಿನ ಗಡಿರೇಖೆಯುದ್ದಕ್ಕೂ ಇರುವ ಸೇನಾಘಟಕಗಳಲ್ಲಿ ನಿಯೋಜನೆಗೊಳಿಸಲಾಗಿದ್ದು, ಇನ್ನಿಬ್ಬರು ಪಾಕಿಸ್ತಾನ ಜೊತೆಗಿನ ಗಡಿಮುಂಚೂಣಿಯಲ್ಲಿರುವ ಸವಾಲುದಾಯಕ ಸ್ಥಳಗಳಲ್ಲಿ ನಿಯುಕ್ತಿಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!