November 10, 2024

ಬ್ರಹ್ಮಾವರ: ಪರವಾನಿಗೆ ಇಲ್ಲದೆ ಭೋಜನ ಕೂಟ ಏರ್ಪಾಡು: ನೀತಿ ಸಂಹಿತೆ ಉಲ್ಲಂಘನೆಯಲ್ಲಿ ಪ್ರಕರಣ ದಾಖಲು

0

ಬ್ರಹ್ಮಾವರ: ಶ್ಯಾಮರಾಯ ಎಂಬವರ ಮನೆಯಲ್ಲಿ ಪರವಾನಿಗೆ ಇಲ್ಲದೆ ಭೋಜನ ಕೂಟ ಏರ್ಪಡಿಸುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಧಿಕಾರಿ ಕುಮಾರ್ ನಾಯ್ಕ ವಿ. ಅವರು ಮಾಹಿತಿಯ ಹಿನ್ನಲೆಯಲ್ಲಿ ಸ್ಥಳಕ್ಕೆ ಹೋಗಿ ನೋಡಿದಾಗ ಸುಮಾರು 40ರಿಂದ 50 ಮಂದಿ ಊಟ ಮಾಡುತ್ತಿರುವುದು ಕಂಡು ಬಂದಿದೆ.

ಇನ್ನು ಅಧಿಕಾರಿಗಳನ್ನು ಕಂಡ ಕೂಡಲೇ ಎಲ್ಲರೂ ಊಟವನ್ನು ಅರ್ಧದಲ್ಲೆ ಬಿಟ್ಟು ಪರಾರಿಯಾಗಿದ್ದು, ಸ್ಥಳವನ್ನು ಪರೀಶೀಲಿಸಲಾಗಿ 10 ಸ್ಟೀಲ್ ಟೇಬಲ್, 60 ಪ್ಲಾಸ್ಟಿಕ್ ಕುರ್ಚಿಗಳು, ಮದ್ಯದ ಬಾಟಲ್ ಸೇರಿದಂತೆ ಹಲವು ಸೊತ್ತು ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!