March 19, 2026

ಕಾಸರಗೋಡು: ತರಕಾರಿ ಖರೀದಿಸುವ ಸೋಗಿನಲ್ಲಿ ಬಂದು ಅಂಗಡಿ ಮಾಲಕಿಯ ಚಿನ್ನದ ಸರ ಎಗರಿಸಿ ಪರಾರಿ

0
image_editor_output_image977010911-1682661607539.jpg

ಕಾಸರಗೋಡು: ತರಕಾರಿ ಖರೀದಿಸುವ ಸೋಗಿನಲ್ಲಿ ದ್ವಿಚಕ್ರ ವಾಹನದಲ್ಲಿ ಅಂಗಡಿಗೆ ಬಂದ ಕಳ್ಳನೋರ್ವ ಅಂಗಡಿಯ ಮಾಲಕಿಯ ಕುತ್ತಿಗೆಯಲ್ಲಿದ್ದ ಮೂರೂವರೆ ಪವನ್‌ನ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಪರವನಡ್ಕ ಕೋಟ್ಟಪುರದಲ್ಲಿ ನಡೆದಿದೆ.

ಕುಂಞಿಕೋರನ್‌ ಅವರ ಪತ್ನಿ ಲಕ್ಷ್ಮೀ (68) ಸರ ಕಳೆದುಕೊಂಡವರು. ಲಕ್ಣ್ಮಿ ಅವರ ಅಂಗಡಿಗೆ ಎ.26ರಂದು ಮಧ್ಯಾಹ್ನ 12 ಗಂಟೆಗೆ ಹೆಲ್ಮೆಟ್‌ ಧರಿಸಿ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿ ಆಲೂಗಡ್ಡೆ ನೀಡುವಂತೆ ಕೇಳಿದ್ದ.

ಆಲೂಗಡ್ಡೆ ತೆಗೆಯಲೆಂದು ಲಕ್ಷಿ$¾à ಬಗ್ಗಿದಾಗ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾನೆ ಎಂದು ಮೇಲ್ಪರಂಬ ಪೊಲೀಸರಿಗೆ ದೂರು ನೀಡಲಾಗಿದೆ

Leave a Reply

Your email address will not be published. Required fields are marked *

error: Content is protected !!