March 19, 2026

ಮಂಗಳೂರು: ಸರಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: 5ನೇ ಗ್ಯಾರಂಟಿ ಘೋಷಿಸಿದ ರಾಹುಲ್

0
IMG-20230427-WA0031.jpg

ಮಂಗಳೂರು: ಕಾಂಗ್ರೆಸ್‌ನ ಐದನೇ ಗ್ಯಾರಂಟಿಯನ್ನು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ‌ ಅವರು ಗುರುವಾರ ಘೋಷಣೆ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೊದಲ ದಿನದಿಂದಲೇ ಮಹಿಳೆಯರಿಗೆ ಸರಕಾರಿ ಬಸ್ಸಲ್ಲಿ ಉಚಿತ ಪ್ರಯಾಣ ಎಂದು ಘೋಷಿಸಿದ್ದಾರೆ.

ಮಂಗಳೂರು ನಗರದ ಹೊರವಲಯದ ಅಡ್ಯಾರ್ ನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಚುನಾವಣ‌ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿರುವ ಅವರು, ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಮೊದಲನೆ ದಿನವೇ ಮಹಿಳೆಯರಿಗೆ ಸರಕಾರಿ ಬಸ್ಸಲ್ಲಿ ಉಚಿತ ಪ್ರಯಾಣ ವ್ಯವಸ್ಥೆಯನ್ನು ಮಾಡಲಾಗುವುದು ಎಂಎಉ ಘೋಷಿಸಿದ್ದಾರೆ.

ಇನ್ನು ಕೆಲವು ವರ್ಷಗಳಿಂದ ಇಲ್ಲಿ ಬಿಜೆಪಿ ಸರ್ಕಾರ ಇದೆ, ಆದರೆ ಇದನ್ನು ನೀವು ಆಯ್ಕೆ ಮಾಡಿರಲಿಲ್ಲ. ನಿಮ್ಮ ವೋಟ್ ಗಳಿಂದ ಅದು ಬಂದಿರಲಿಲ್ಲ, ಬಿಜೆಪಿ ಅದನ್ನು ಕಳ್ಳತನದಿಂದ ಮಾಡಿತ್ತು. ಭ್ರಷ್ಟಾಚಾರ ಹಣದಿಂದ ಶಾಸಕರನ್ನ ಖರೀದಿಸಿದ್ದರು. ತಮ್ಮ ಸರ್ಕಾರವನ್ನ ತಮ್ಮಿಂದ ಕಳವು ಮಾಡಿದ್ದರು, ಕಳ್ಳತನ ಇವರಿಗೆ ಅಭ್ಯಾಸ ಆಗಿ ಹೋಗಿದೆ. ಇವರ ಕೈಯ್ಯಲ್ಲಿ ಶಾಸಕ, ಗುತ್ತಿಗೆದಾರ, ಶುಗರ್ ಫ್ಯಾಕ್ಟರಿ ಎಲ್ಲವನ್ನೂ ಕಳವು ಮಾಡ್ತಾರೆ. ಒಬ್ಬ ಬಿಜೆಪಿ‌ ನಾಯಕ ಹೇಳ್ತಾರೆ, ಈ ಚುನಾವಣೆ ರಾಜ್ಯವನ್ನ ಮೋದಿ ಕೈಯ್ಯಲ್ಲಿ ಕೊಡೋ ಚುನಾವಣೆ ಅಂತ. ಈಗ ಯಾರ ಕೈಯ್ಯಲ್ಲಿದೆ? ಬಿಜೆಪಿ ಕೈಯ್ಯಲ್ಲೇ ಇದೆ ತಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪೆಟ್ರೋಲ್ ಮೇಲೆ 60 ರಿಂದ 90 ರೂ ಆಗಿದೆ. ಅಡಿಗೆ ಅನಿಲ 400 ರಿಂದ 1100 ರೂ. ಆಗಿದೆ. ನೋಟ್ ಬ್ಯಾನ್ ಬಡವರ ಹಣವನ್ನು ಕಡಿದು ಕೊಂಡಿದೆ. ಯುವಕರಿಗೆ ಉದ್ಯೋಗ ಸಿಗ್ತಾ ಇಲ್ಲ, ಬಿಜೆಪಿ ಸರ್ಕಾರ ಉದ್ಯೋಗ ಕಲ್ಪಿಸಲ್ಲ. 40 ಕೋಟಿ ಜನ ಮತ್ತೆ ಬಡತನ ರೇಖೆಯ ಕೆಳಗೆ ಹೋಗಿದ್ದಾರೆ. 90 ಲಕ್ಷ ಸಣ್ಣ ಮತ್ತು ಮಾಧ್ಯಮ ಕೈಗಾರಿಕೆ ಮುಚ್ಚಿ ಹೋಗಿದೆ. ಇದು ಬಿಜೆಪಿಯ ವಿಕಾಸ ಮಂತ್ರ, ಭ್ರಷ್ಟಾಚಾರ 40%, ನಿರುದ್ಯೋಗ ಮತ್ತು ಬೆಲೆ ಏರಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!