March 19, 2026

ಅರುಣ್ ಕುಮಾರ್ ಪುತ್ತಿಲ ಹಿಂದುತ್ವವಾದಿ ಅಲ್ಲ: ಕಲ್ಲಡ್ಕ ಪ್ರಭಾಕರ್ ಭಟ್ ವಾಗ್ದಾಳಿ

0
Screenshot_2023-04-27-17-06-21-12_680d03679600f7af0b4c700c6b270fe7.jpg

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಆರ್‌ಎಸ್ಎಸ್ ಹಿರಿಯ ನಾಯಕ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹರಿಹಾಯ್ದಿದ್ದಾರೆ.

ಅರುಣ್ ಕುಮಾರ್ ಪುತ್ತಿಲ
ಪ್ರವೀಣ್ ನೆಟ್ಟಾರು ಮನೆ ಗೃಹಪ್ರವೇಶಕ್ಕೆ ಆಗಮಿಸಿದ್ದ ಡಾ. ಪ್ರಭಾಕರ್ ಭಟ್ ಸುದ್ದಿಗಾರರೊಂದಿಗೆ ಜೊತೆ ಮಾತನಾಡಿ ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅರುಣ್ ಪುತ್ತಿಲ ಯಾವ ಸೀಮೆಯ ಹಿಂದುತ್ವವಾದಿರಿ ಎಂದು ತರಾಟೆಗೆ ತಗೊಂಡ ಅವರು ದೇವಸ್ಥಾನದ ದುಡ್ಡು ಹೊಡೆದ, ಹಿಂದುಗಳ ಮೇಲೆಯೇ ದೌರ್ಜನ್ಯ ನಡೆಸಿದ ವ್ಯಕ್ತಿ ಅರುಣ್ ಪುತ್ತಿಲ, ಗೋ ಸಾಗಾಟ ಮಾಡುವಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆದಾಗ ಅರುಣ್ ಕೂಡಾ ಅದರಲ್ಲಿ ಒಬ್ಬನಾಗಿದ್ದ ಅಷ್ಟೇ.

ಅದು ಬಿಟ್ಟು ಬೇರೆ ಹಿಂದುತ್ವದ ಕಾರ್ಯ ಅವನಿಂದ ಏನೂ ನಡೆಯಲಿಲ್ಲ, ಕೇಂದ್ರದ ಗೃಹಸಚಿವ ಅಮಿತ್ ಶಾ ಮಾತನಾಡುವುದಾಗಿ ಹೇಳಿದಾಗ ಧಿಕ್ಕರಿಸಿದ ವ್ಯಕ್ತಿ ಅರುಣ್ ಪುತ್ತಿಲ, ಕಾರ್ಯಕರ್ತರು ಕೆಲವರು ಈ ವಿಚಾರ ತಿಳಿಯದೆ ಅವನ ಹಿಂದೆ ಓಡಾಡುತ್ತಿದ್ದಾರೆ. ಅವರಿಗೆ ಸದ್ಯದಲ್ಲೇ ಈ ವಿಚಾರ ತಿಳಿಯಲಿದೆ ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!