February 1, 2026

ಬಾಲಿವುಡ್ ನಟಿಯ ಬಂಧನ: ಶಾರ್ಜಾ ಸೆಂಟ್ರಲ್ ಜೈಲಿಗೆ ಶಿಫ್ಟ್

0
image_editor_output_image-1467799224-1682489495752.jpg

ಬಾಲಿವುಡ್ ನಟಿ ಕ್ರಿಸನ್ ಪಿರೇರಾ ಇದೀಗ ಜೈಲು ಕಂಬಿ ಎಣಿಸುತ್ತಿದ್ದಾರೆ. ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಈ ನಟಿಯನ್ನು ಯುಎಇ ಪೊಲೀಸರು ಬಂಧಿಸಿ ಶಾರ್ಜಾ ಸೆಂಟ್ರಲ್ ಜೈಲಿಗೆ ಕಳುಹಿಸಿದ್ದಾರೆ.

ಏಪ್ರಿಲ್ 1 ರಂದೇ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಟ್ರೋಫಿ ಒಳಗೆ ಡ್ರಗ್ಸ್ ಸಾಗಿಸುತ್ತಿದ್ದರು ಎನ್ನುವ ಕಾರಣದಿಂದಾಗಿ ಪೊಲೀಸರು ಬಂಧಿಸಿದ್ದಾರೆ.

ಡ್ರಗ್ಸ್ ಕೇಸ್ ಕುರಿತಂತೆ ಮುಂಬೈನಲ್ಲೂ ತನಿಖೆ ನಡೆಸಿದ್ದ ಮುಂಬೈ ಪೊಲೀಸರು ಅಚ್ಚರಿಯ ಮಾಹಿತಿಯನ್ನು ಹೊರ ಹಾಕಿದ್ದಾರೆ. ಇದೊಂದು ಷಡ್ಯಂತ್ರ, ಆ ನಟಿಯ ನೆರೆಮನೆಯಾತನ ಕುತಂತ್ರದಿಂದಾಗಿ ಅವರು ಜೈಲು ಸೇರಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಪಿರೇರಾ ನೆರೆಮನೆಯಾತ ಹಾಗೂ ಬೇಕರಿ ಮಾಲೀಕನೂ ಆಗಿರುವ ಆಂಟೋನಿ ಪಾಲ್ ಮತ್ತು ಬ್ಯಾಂಕ್ ವೊಂದರ ಅಸಿಸ್ಟೆಂಟ್ ಮ್ಯಾನೇಜರ್ ರಾಜೇಶ್ ಬೋಭಟೆ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!