February 2, 2026

ಉಳ್ಳಾಲ: ದರ್ಗಾ ವಿಹಾರಕ್ಕೆ ಬಂದ ವ್ಯಕ್ತಿ ಸಮುದ್ರಪಾಲು, ಮಗನ ರಕ್ಷಣೆ

0
20230424_212335.jpg

ಉಳ್ಳಾಲ: ದರ್ಗಾಕ್ಕೆ ಬಂದಿದ್ದ ವ್ಯಕ್ತಿಯೋರ್ವರು ಸಮುದ್ರದಲ್ಲಿ ಮಕ್ಕಳೊಂದಿಗೆ ನೀರಾಟಕ್ಕಿಳಿದ ವೇಳೆ ನೀರುಪಾಲಾಗಿ ಮೃತಪಟ್ಟಿದ್ದು ,ಆತನ ಮಗನನ್ನ ಸ್ಥಳೀಯ ಈಜುಗಾರರು ರಕ್ಷಿಸಿದ್ದಾರೆ. ಮಳಲಿ ನಿವಾಸಿ ಖಾಲಿದ್(51) ಸಮುದ್ರ ಪಾಲಾದ ವ್ಯಕ್ತಿ.

ಖಾಲಿದ್ ಅವರು ತನ್ನ ಪತ್ನಿ,ಮಗ,ಸಂಬಂಧಿ ಮಕ್ಕಳ ಜೊತೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ್ದರು.ದರ್ಗಾ ಭೇಟಿ ಬಳಿಕ ಉಳ್ಳಾಲ ಬೀಚ್ ಗೆ ತೆರಳಿದ್ದರು.ಈ ವೇಳೆ ಖಾಲಿದ್ ಮಗನೊಂದಿಗೆ ನೀರಾಟವಾಡುತ್ತಿದ್ದ ವೇಳೆ ಅಬ್ಬರದ ಅಲೆಯು ಖಾಲಿದನ್ನು ನೀರು ಪಾಲಾಗಿಸಿದೆ.ಸ್ಥಳದಲ್ಲಿದ್ದ ಈಜುಗಾರರು ಖಾಲಿದ್ ಅವರ ಮಗನನ್ನು ರಕ್ಷಿಸಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಜೆ ವೇಳೆ ಖಾಲಿದ್ ಅವರ ಮೃತದೇಹ ಸಮುದ್ರ ತೀರದಲ್ಲಿ ಸಿಕ್ಕಿದ್ದು ಉಳ್ಳಾಲ ಠಾಣಾ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!