ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರನ್ನು ಸ್ವಾಗತಿಸಲು ಬಂದಿದ್ದ ಉದ್ಯಮಿ ಸೂಟ್ಕೇಸ್ ನಲ್ಲಿ ಹಣ ಪತ್ತೆ
ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಲು ಬಂದಿದ್ದ ಆಪ್ತ ಉದ್ಯಮಿ ಯು.ಬಿ ಶೆಟ್ಟಿ ಸೂಟ್ಕೇಸ್ನಲ್ಲಿ ಹಣ ಪತ್ತೆಯಾಗಿದೆ.
ಇಂದು ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಲು ಯುಬಿ ಶೆಟ್ಟಿ ಅವರು ಬೈಂದೂರಿನ ಹರೇ ಶಿರೂರು ಹೆಲಿಪ್ಯಾಡ್ ಬಳಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಯುಬಿ ಶೆಟ್ಟಿ ಆಗಮಿಸಿದ ಕಾರನ್ನು ಚುನಾವಣಾಧಿಕಾರಿಗಳು ತಪಾಸಣೆ ಮಾಡಿದ್ದು, ಈ ವೇಳೆ ಕಾರಿನಲ್ಲಿದ್ದ ಸೂಟ್ಕೇಸ್ ನಲ್ಲಿ 50,000 ರೂ. ನಗದು ಹಣ ಇರುವುದು ಪತ್ತೆಯಾಗಿದೆ.
ಹಣವನ್ನ ಸೀಜ್ ಮಾಡಿಕೊಂಡಿರುವ ಅಧಿಕಾರಿಗಳು. ಯುಬಿ ಶೆಟ್ಟಿ ಅವರಿಗೆ ನೋಟಿಸ್ ನೀಡಿ ಜಾರಿ ಮಾಡಿದ್ದಾರೆ.




