ರಾತ್ರಿ ವೇಳೆ ಸಂಚಾರಿ ನಿಯಮಕ್ಕೆ ವಿರುದ್ಧವಾಗಿ ಕಣ್ಣುಕುಕ್ಕುವ ಹೆಡ್ ಲೈಟ್: 25 ವಾಹನಗಳ ಮೇಲೆ ಕೇಸ್ ದಾಖಲು
ಮಂಗಳೂರು: ನಗರ ಪೊಲೀಸ್ ಆಯುಕ್ತ ಕುಲ್‌ದೀಪ್ ಕುಮಾರ್ ಆರ್ ಜೈನ್ ಆದೇಶದ ಮೇರೆಗೆ ನಗದಾದ್ಯಂತ ರಾತ್ರಿ ವೇಳೆ ಸಂಚಾರಿ ನಿಯಮಕ್ಕೆ ವಿರುದ್ಧವಾಗಿ ಕಣ್ಣುಕುಕ್ಕುವ ಲೈಟ್ ಅಳವಡಿಸಿದ್ದಾರೆ.
ರಾತ್ರಿ ವೇಳೆ ಮುಂದಿನಿಂದ ಬರುವ ವಾಹನ ಸವಾರರಿಗೆ ತೀವ್ರ ಅಡಚಣೆಯುಂಟಾಗುತ್ತಿದೆ. ಈ ಬಗ್ಗೆ ವಿಶೇಷ ಅಭಿಯಾನ ನಡೆಸಿದ ಪೊಲೀಸರು ಬಸ್ಸು, ರಿಕ್ಷಾ, ಕಾರು ಸೇರಿದಂತೆ ಹಲವು ದ್ವಿಚಕ್ರವಾಹನ ಸೇರಿದಂತೆ ಒಟ್ಟು 25 ವಾಹನಗಳ ಮೇಲೆ ಕೇಸು ದಾಖಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆಯುಕ್ತರು ಸಂಚಾರಿ ನಿಯಮ ಪಾಲಿಸಿ ಹೆಡ್‌ಲೈಟ್ ಅಳವಡಿಸಿ ಎಂದು ಸಲಹೆ ನೀಡಿದ್ದಾರೆ.




