February 2, 2026

ಬ್ರಹ್ಮಾವರ: ಹೊಳೆಯಲ್ಲಿ ದೋಣಿ ಮಗುಚಿ ಮೂವರು ಮೃತ್ಯು, ಓರ್ವ ನೀರುಪಾಲು:
ಈದ್ ಹಿನ್ನೆಲೆ ಸಂಬಂಧಿಕರ ಮನೆಗೆ ಬಂದಿದ್ದ ಯುವಕರು ದುರ್ಘಟನೆಯಲ್ಲಿ ಮೃತ್ಯು

0
inbound9220006979470438462.jpg

ಬ್ರಹ್ಮಾವರ: ದೋಣಿ ಮಗುಚಿ ಮೂವರು ಯುವಕರು ಮೃತಪಟ್ಟಿದ್ದು, ಓರ್ವ ಯುವಕ ನೀರು ಪಾಲಾಗಿ ನಾಪತ್ತೆಯಾಗಿರುವ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕುಡೆ ಕುದ್ರು ಎಂಬಲ್ಲಿ ನಡೆದಿದೆ.

ಹೂಡೆಯ ಫೈಝಾನ್ ಸೇರಿ ಸಂಬಂಧಿಗಳಾದ ಒಟ್ಟು 7 ಮಂದಿ ಯುವಕರು ದೋಣಿಯಲ್ಲಿ ತೆರಳುವಾಗ ಅವಘಡ ನಡೆದಿದೆ.

ರಂಝಾನ್ ರಜೆಯ ಹಿನ್ನೆಲೆಯಲ್ಲಿ ತೀರ್ಥಳ್ಳಿಯ ಯುವಕರು ಹೂಡೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಅಲ್ಲಿಂದ ಒಟ್ಟು ಏಳು ಮಂದಿ ವಾಯು ವಿಹಾರಕ್ಕೆಂದು ಹೂಡೆಯ ಗುಡ್ಡೇರಿ ಕಂಬಳದಿಂದ ಕುಕ್ಕುಡೆ ಕುದ್ರುವಿಗೆ ದೋಣಿಯಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ದೋಣಿ ಮಗುಚಿ ಬಿದ್ದ ಪರಿಣಾಮ ಏಳು ಮಂದಿ ನೀರಿಗೆ ಬಿದ್ದರು. ಇದರಲ್ಲಿ ಮೂವರು ಈಜಿಕೊಂಡು ಕುದ್ರುವಿಗೆ ಸೇರಿಕೊಂಡರು. ಉಳಿದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ

ದೋಣಿ ಮಗುಚಿದಾಗ 7 ಮಂದಿಯಲ್ಲಿ ಮೂವರು ಈಜಿ ಕೊಂಡು ದಡ ಸೇರಿಕೊಂಡರು. ಉಳಿದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈಗಾಗಲೆ ಮೂವರ ಮೃತದೇಹ ಮೇಲಕ್ಕೆ ಎತ್ತಲಾಗಿದೆ. ಇನ್ನೋರ್ವನಿಗೆ ಹುಡುಕಾಟ ನಡೆಸಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!