March 19, 2026

ಉಡುಪಿ: ಭೀಕರ ಸರಣಿ ಅಪಘಾತ: ಓರ್ವ ಸ್ಥಳದಲ್ಲೇ ಮೃತ್ಯು, ಮತ್ತೋರ್ವ ಗಂಭೀರ

0
pro.webp

ಉಡುಪಿ: ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ತೆಕ್ಕಟ್ಟೆ ದಿನಸಿ ವ್ಯಾಪಾರಿ ನಾಗರಾಜ ದೇವಾಡಿಗ (40) ಮೃತ ದುರ್ದೈವಿ.

ಮಹೀಂದ್ರಾ ಥಾರ್ ವಾಹನ, ಸೈಕಲ್, ಸ್ಕೂಟರ್, ಬೈಕ್ ಸಹಿತ ಸರಣಿ ಅಪಘಾತ ಸಂಭವಿಸಿದ್ದು, ಮಹೀಂದ್ರಾ ಥಾರ್ ವಾಹನ ಚಾಲಕನ ನಿರ್ಲಕ್ಷ್ಯ ವೇ ಅಪಘಾತ ಕ್ಕೆ ಕಾರಣ ಎಂದು ಹೇಳಲಾಗಿದೆ.

ಇನ್ನು ಅಪಘಾತ ದೃಶ್ಯಾವಳಿ ಗಳು ಸಮೀಪದ ಶ್ರೀ ಚಂಡಿಕಾ ದೇಗುಲದಲ್ಲಿನ ಸಿಸಿ‌ ಟಿವಿಯಲ್ಲಿ ಸೆರೆಯಾಗಿದ್ದು ಬೆಚ್ಚಿ ಬೀಳುವಂತಿದೆ.

ಸೈಕಲ್ ಸವಾರ ಕುಂಭಾಶಿ ನಿವಾಸಿ ಕೃಷ್ಣ ದೇವಾಡಿಗ ಅವರು ಗಂಭೀರ ವಾಗಿ ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!