ವಿಟ್ಲ: ಪತ್ನಿಯ ಮನೆಗೆ ತೆರಳಿದ ವ್ಯಕ್ತಿ ನಾಪತ್ತೆ: ದೂರು ದಾಖಲು
ವಿಟ್ಲ: ಪತ್ನಿಯ ಮನೆಗೆ ಬಂದ ವ್ಯಕ್ತಿಯೋರ್ವರು ತನ್ನ ಮನೆಗೆ ತೆರಳದೆ ನಾಪತ್ತೆಯಾದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಅನಂತಾಡಿ ಗ್ರಾಮದ ದರ್ಖಾಸು ಎಂಬಲ್ಲಿ ನಡೆದಿದೆ.
ಲೋಕನಾಥ ಪೂಜಾರಿ (48) ನಾಪತ್ತೆಯಾದವರು. ಈ ಬಗ್ಗೆ ಅವರ ಪತ್ನಿ ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎ.17 ರಂದು ಲೋಕನಾಥ ಪೂಜಾರಿಯವರು ತನ್ನ ಮನೆಯಾದ ಕಾರಾಜೆಯಿಂದ ಪತ್ನಿಯ ತಾಯಿ ಮನೆಯಾದ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ದರ್ಖಾಸು ಎಂಬಲ್ಲಿಗೆ ಬಂದಿದ್ದು, ಆ ದಿನ ಅಲ್ಲಿಯೇ ಉಳಿದುಕೊಂಡು, ಎ.18 ರಂದು ಅನಂತಾಡಿಯಿಂದ ಕಾರಾಜೆಗೆ ಹೋಗುತ್ತೇನೆ ಎಂದು ಹೇಳಿ ಹೋದವರು ಈವರೆಗೆ ಮನೆಗೆ ಬಂದಿರುವುದಿಲ್ಲ. ಅಲ್ಲದೇ ಲೋಕನಾಥ ಪೂಜಾರಿ ಸ್ವಲ್ಪ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು.
ಮನೆಯಿಂದ ಹೊರಡುವ ವೇಳೆ ಮೊಬೈಲ್ ಫೋನ್ ಬಿಟ್ಟು ತೆರಳಿದ್ದು, ಸಂಬಂಧಿಕರ ಮನೆಗಳಿಗೆ ಫೋನ್ ಮಾಡಿ ವಿಚಾರಿಸಿದಾಗ, ಎಲ್ಲಾ ಕಡೆ ಹುಡುಕಿದಾಗ ಎಲ್ಲಿಯೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.




