ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ ಅವರ ತಾಯಿ ನಿಧನ
ಕೊಚ್ಚಿ: ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ ಅವರ ತಾಯಿ ಫಾತಿಮಾ ಇಸ್ಮಾಯಿಲ್ (93) ಶುಕ್ರವಾರ (ಏಪ್ರಿಲ್ 21 ರಂದು) ನಿಧನರಾದರು. ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಅವರು ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಭಾರತ ಸಿನಿಮಾರಂಗದ ಖ್ಯಾತ ನಟರಾಗಿರುವ ಮಮ್ಮುಟ್ಟಿ ಅವರ ತಾಯಿ ಕಳೆದ ಕೆಲ ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ವರದಿಯ ಪ್ರಕಾರ ಶುಕ್ರವಾರ ಸಂಜೆ ಕೊಟ್ಟಾಯಂನ ಚೆಂಪುವಿನ ಅವರ ಹುಟ್ಟೂರಲ್ಲಿ ದಫನ ಕಾರ್ಯ ನಡೆಯಲಿದೆ.
ಫಾತಿಮಾ ಇಸ್ಮಾಯಿಲ್ ಅವರಿಗೆ ಮಮ್ಮುಟ್ಟಿ,ಇಬ್ರಾಹಿಂ ಕುಟ್ಟಿ , ಶಫೀನಾ, ಅಮೀನಾ, ಸೌದಾ ಮತ್ತು ಜಕರಿಯಾ ಎನ್ನುವ ಮಕ್ಕಳಿದ್ದಾರೆ. ಮಮ್ಮುಟ್ಟಿ ಹಿರಿಯ ಮಗನಾಗಿದ್ದಾರೆ.




