February 3, 2026

ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡನ ಮೃತದೇಹ ಕೆರೆಯಲ್ಲಿ ಪತ್ತೆ

0
image_editor_output_image388089525-1681690167686.jpg

ಹಾಸನ : ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡರೊಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಹಾಸನದಲ್ಲಿ
ವರದಿಯಾಗಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಹೋಬಳಿಯ ಪ್ರದೇಶ ಕಾಂಗ್ರೆಸ್‌ ಯುವ ಬ್ರಿಗೇಡ್‌ ಉಪಾಧ್ಯಕ್ಷ ವಿ.ಮಹೇಶ್(45) ಶವವಾಗಿ ಪತ್ತೆಯಾದವರು ಎಂದು ಗುರುತಿಸಲಾಗಿದೆ.

ಇವರು ನಲ್ಲೂರು ಜಾತ್ರೆಗೆ ಬಂದು ದೇವರ ದರ್ಶನ ಪಡೆದು ಕುಟುಂಬಿಕರಿಗೆ ಊಟ ತರುವುದಾಗಿ ಮನೆಯಿಂದ ತೆರಳಿದ್ದವರು ನಾಪತ್ತೆಯಾಗಿದ್ದರು.

ಸ್ನೇಹಿತರು, ಕುಟುಂಬಸ್ಥರು ಅವರಿಗಾಗಿ ಹುಡುಕಾಟ ನಡೆಸಿದರು ಪತ್ತೆಯಾಗಿರಲಿಲ್ಲ. ಆದರೆ ಇಂದು ನಲ್ಲಪ್ಪನಹಳ್ಳಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿನ‌ ಕುರಿತು ಶಂಕೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!