February 3, 2026

ಕಾಸರಗೋಡು: ಬೀದಿ ದೀಪ ದುರಸ್ಥಿ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶ: ಕಾರ್ಮಿಕ ಸಾವು

0
image_editor_output_image-1314191545-1681688708742.jpg

ಕಾಸರಗೋಡು: ಬೀದಿ ದೀಪ ದುರಸ್ಥಿ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಕಾರ್ಮಿಕನೋರ್ವ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.

ಕುಂಬಳೆ ಶಿರಿಯದ ಮುಹಮ್ಮದ್ ಹನೀಫ್(40) ಮೃತಪಟ್ಟವರು. ವಿದ್ಯುತ್ ಕಂಬಕ್ಕೆ ಹತ್ತಿ ದುರಸ್ತಿಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ. ಪರಿಸರ ವಾಸಿಗಳು ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದರು.

ಪ್ರಕರಣದ ಕುರಿತಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!