September 3, 2026

ಕಲಬುರಗಿ: ಶಾಸಕ ಅವಿನಾಶ್ ಜಾಧವ್ ಮತ್ತು ಬೆಂಬಲಿಗರ ಕಾರುಗಳ‌ ಮೇಲೆ ಕಲ್ಲು ತೂರಾಟ

0
n4905364641681622770725a76ed808f22a4d42256602bb111d2e73f819d223066a9fd08f23032e64172b0b.jpg

ಕಲಬುರಗಿ: ಶಾಸಕ ಡಾ.ಅವಿನಾಶ್ ಜಾಧವ್ ಮತ್ತು ಬೆಂಬಲಿಗರ ಕಾರುಗಳ ಮೇಲೆ ಕಲ್ಲು ತೂರಾಟ ಮತ್ತು ಹಲ್ಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಕಾಳಗಿ ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ನಡೆದಿದೆ.

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ.ಅವಿನಾಶ್ ಜಾಧವ್ ಚುನಾವಣೆ ಪ್ರಚಾರಕ್ಕೆಂದು ನಿನ್ನೆ (ಏ.15) ರಾತ್ರಿ ಚಂದನಕೇರಾ ಗ್ರಾಮಕ್ಕೆ ಹೋಗಿದ್ದರು. ಈ ವೇಳೆ ಗ್ರಾಮದ ಕೆಲ ಕಿಡಿಗೇಡಿಗಳು ಡಾ. ಬಿ. ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿಲ್ಲಾ ಅಂತ ನೆಪವೊಡ್ಡಿ ಜಗಳ ತೆಗೆದಿದ್ದಾರೆ. ನಂತರ ಕಾರುಗಳ ಮೇಲೆ ಕಲ್ಲೆಸೆದು, ಡಾ.ಅವಿನಾಶ್ ಜಾಧವ್ ಮತ್ತು ಬೆಂಬಲಿಗರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ಈ ಹಿನ್ನೆಲೆ ತಡರಾತ್ರಿ ಚಂದನಕೇರಾ ಗ್ರಾಮಕ್ಕೆ ಆಗಮಿಸಿದ ಪೊಲೀಸರು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ. ತಡರಾತ್ರಿಯೇ ಪೊಲೀಸರು ಏಳು ಜನರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಕಲಬುರಗಿ ಎಸ್ಪಿ ಇಶಾ ಪಂತ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹಾಗೇ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಟಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!