February 2, 2026

ಬಂಟ್ವಾಳ: ಸ್ಕೂಟರ್‌‌ಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಕೆಎಸ್ಆರ್‌‌ಟಿಸಿ ಬಸ್: ಸವಾರ ಸ್ಥಳದಲ್ಲಿಯೇ ಮೃತ್ಯು, ಚಾಲಕ ಪರಾರಿ

0
IMG-20230414-WA0034.jpg

ಬಂಟ್ವಾಳ: ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟು ಎಂಬಲ್ಲಿ ಕೆಎಸ್ಆರ್‌‌ಟಿಸಿ ಬಸ್ ಸ್ಕೂಟರ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಭಂಡಾರಿಬೆಟ್ಟು ನಿವಾಸಿ ಡೊಂಬಯ್ಯ ಮೂಲ್ಯ (60) ಮೃತಪಟ್ಟ ವ್ಯಕ್ತಿ.

ಡೊಂಬಯ್ಯ ಅವರು ಬಂಟ್ವಾಳ ಬೈಪಾಸ್ ರಸ್ತೆಯಲ್ಲಿ ಜಕ್ರಿಬೆಟ್ಟು ಕಡೆಯಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಸರಕಾರಿ ಬಸ್ ಹಿಂಬದಿಯಿಂದ ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಡೊಂಬಯ್ಯ ಬಿಸಿರೋಡು ಕುಲಾಲ ಸಮುದಾಯ ಭವನದಲ್ಲಿ ಅನೇಕ ವರ್ಷಗಳಿಂದ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರು ಸಂಬಂಧಿಕರ ಮನೆಯಲ್ಲಿ ಸಂಕ್ರಮಣದ ದಿನದಂದು ದೈವದ ಕೆಲಸಕ್ಕೆ ಹೂ ತರಲೆಂದು ಬಿಸಿರೋಡು ಕಡೆಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಅಪಘಾತ ಸಂಭವಿಸಿದ ಕೂಡಲೇ ಬಸ್ ಚಾಲಕ ಬಸ್ ನಿಂದ ಇಳಿದು ಪರಾರಿಯಾಗಿದದು, ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೊಲೀಸರು ಭೇಟಿ ‌ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!