February 1, 2026

ಡೇರಿ ಫಾರ್ಮ್ ನಲ್ಲಿ ಸ್ಪೋಟ: 18 ಸಾವಿರಕ್ಕೂ ಹೆಚ್ಚು ಹಸುಗಳು ಸಾವು

0
image_editor_output_image-1085401272-1681427910829.jpg

ಟೆಕ್ಸಾಸ್: ಡೇರಿ ಫಾರ್ಮ್ ಒಂದರಲ್ಲಿ ದೊಡ್ಡ ಸ್ಪೋಟ ಸಂಭವಿಸಿ ಸುಮಾರು 18 ಸಾವಿರಕ್ಕೂ ಹೆಚ್ಚು ಹಸುಗಳು ಮೃತಪಟ್ಟಿರುವ ಘಟನೆ ಅಮೆರಿಕದ ಪಶ್ಚಿಮ ಟೆಕ್ಸಾಸ್‌ನಲ್ಲಿ ನಡೆದಿದೆ.

ಈ ಕುರಿತು ಯುಎಸ್‌ಎ ಟುಡೇ ವೆಬ್‌ಸೈಟ್ ವರದಿ ಮಾಡಿದೆ.

ಸೋಮವಾರ ಸಂಜೆ ಪಶ್ಚಿಮ ಟೆಕ್ಸಾಸ್‌ನ ಸೌತ್ ಪೋರ್ಕ್ ಡೇರಿ ಎಂಬಲ್ಲಿ ಬಾಯ್ಲರ್ ಸ್ಪೋಟದಿಂದ ಇಡಿ ಫಾರ್ಮ್ ಹೊತ್ತಿ ಉರಿದಿದೆ. ಇದರಿಂದ ಡೇರಿ ಫಾರ್ಮ್‌ನಲ್ಲಿದ್ದ 18 ಸಾವಿರ ಹಸುಗಳು ಮೃತ‍ಪಟ್ಟಿದ್ದು, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ವರದಿ ತಿಳಿಸಿದೆ.

ಮೃತವಾದ ಒಂದು ಹಸುವಿನ ಬೆಲೆ ₹1.63 ಲಕ್ಷ ಇತ್ತು ಎಂದು ತಿಳಿದು ಬಂದಿದೆ. ಅಗ್ನಿಶಾಮಕ ಇಲಾಖೆಯವರು ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದು ತನಿಖೆ ಕೈಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!