ಬಿಜೆಪಿ ಅಭ್ಯರ್ಥಿಗಳ 189 ಮಂದಿಯ ಮೊದಲ ಪಟ್ಟಿ ಬಿಡುಗಡೆ:
ಸುಳ್ಯ ಮತ್ತು ಪುತ್ತೂರಿಗೆ ಮಹಿಳಾ ಅಭ್ಯರ್ಥಿಗಳು
ಪುತ್ತೂರು: ಬಿಜೆಪಿ ಅಭ್ಯರ್ಥಿಗಳ 189 ಮಂದಿಯ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಸುಳ್ಯ ಮತ್ತು ಪುತ್ತೂರಿಗೆ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಸುಳ್ಯ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಿದೆ.
ಸುಳ್ಯದಿಂದ ಭಾಗೀರಥಿ ಮುರುಳ್ಯ ಅವರಿಗೆ ಟಿಕೆಟ್ ದೊರೆತರೆ ಪುತ್ತೂರಿನಿಂದ ಆಶಾ ತಿಮ್ಮಪ್ಪ ಗೌಡ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.




