September 3, 2026

8 ಕೋಟಿ ಮೌಲ್ಯದ ಡ್ರಗ್ಸ್‌ ಪತ್ತೆ: ಐವರು ವಿದೇಶಿಗರ ಬಂಧನ

0
image_editor_output_image155290193-1681169694105.jpg

ಬೆಂಗಳೂರು: ನಗರದ ದಕ್ಷಿಣ ವಿಭಾಗದ ವಿ.ವಿ.ಪುರಂ ಹಾಗೂ ಜಯನಗರ ಠಾಣೆ ಪೊಲೀಸರು 8 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಐವರು ವಿದೇಶಿ ಆರೋಪಿಗಳನ್ನು ಬಂಧಿಸಲಾಗಿದೆ.

ಲಾರೆನ್ಸ್, ಚುಕ್ವೂನೇಮ್, ಹಸ್ಲೆ, ಫ್ರಾಂಕ್ ಜಾಗೂ ಹಾಗು ಇಮ್ಯಾನ್ಯುಲ್ ನಾಝಿ ಬಂಧಿತರು.ಇಬ್ಬರು ವಿದೇಶಿಗರು ಮೆಟ್ರೋ‌ ಸ್ಟೇಷನ್‌ ಸಮೀಪ ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ್ದ ವಿ.ವಿ.ಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಸ್ವಲ್ಪ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ಆರೋಪಿಗಳ ಬಳಿ ವೈಟ್ ಎಂಡಿಎಂಎ, ಬ್ರೌನ್ ಎಂಡಿಎಂಎ ಹಾಗೂ 300 ಗ್ರಾಂ ಕೊಕೈನ್ ಪತ್ತೆಯಾಗಿತ್ತು. ಸಿಂಥೆಟಿಕ್ ಡ್ರಗ್ಸ್ ಮಾದರಿಯ ದುಬಾರಿ ಡ್ರಗ್ಸ್ಗಳಲ್ಲಿ ಇವುಗಳು ಪ್ರಮುಖವಾಗಿದ್ದು, ಬೆಲೆ ಏಳು ಕೋಟಿ ರೂ ಎಂದು ಅಂದಾಜಿಸಲಾಗಿದೆ.

ಇದೇ ರೀತಿ ಜಯನಗರ ಠಾಣೆ ಪೊಲೀಸರು ಖಚಿತ ಮಾಹಿತಿ ಅಧರಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದು 1 ಕೋಟಿ 20 ಲಕ್ಷ ರೂ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!