February 2, 2026

‘ಜೆಡಿಎಸ್‌ ಅಧಿಕಾರಕ್ಕೇರಿದರೆ ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕ್‌ ಸ್ಕೂಟರ್‌’: ಎಚ್‌ಡಿ ಕುಮಾರಸ್ವಾಮಿ ಘೋಷಣೆ
 

0
hr-090423-HDK.jpg

ಬೆಂಗಳೂರು:  ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಜೆಡಿಎಸ್‌ ಗೆದ್ದು ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕ್‌ ಸ್ಕೂಟರ್‌ ಕೊಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ ಯಶವಂತಪುರದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ವೇಳೆ ಮಾತನಾಡಿದ ಅವರು ಹೊಸ ಭರವಸೆಯನ್ನು ನೀಡಿದರು. ಇದು ಜೆಡಿಎಸ್‌ ಇದುವರೆಗೆ ಪ್ರಚಾರ ಮಾಡುತ್ತಿರುವ ಪಂಚರತ್ನ ಭರವಸೆಗಳಿಗೆ ಹೆಚ್ಚುವರಿಯಾಗಿ ನೀಡಿರುವ ಹೊಸ ಗ್ಯಾರಂಟಿಯಾಗಿದೆ.

ಜೆಡಿಎಸ್ ಗೆದ್ದರೆ ಪಂಚರತ್ನ ಕಾರ್ಯಕ್ರಮದ ಜೊತೆಗೆ , ವಿದ್ಯಾರ್ಥಿನಿಯರಿಗೆ ಶಾಲಾ, ಕಾಲೇಜುಗಳಿಗೆ ಹೋಗಿ ಬರಲು ಅನುಕೂಲವಾಗುವಂತೆ ಎಲೆಕ್ಟ್ರಿಕ್‌ ಮೊಪೆಡ್‌ನ್ನು ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುವುದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!